ETV Bharat / state

ಗುಂಡು ಹಾರಿಸಿ ಸ್ವಾಗತ - ಬಿಜೆಪಿಯ ಗೂಂಡಾ, ತಾಲಿಬಾನ್ ಸಂಸ್ಕೃತಿ ಬಟಾ ಬಯಲು: ಕಿಡಿ ಕಾರಿದ ಖಂಡ್ರೆ - ಗುಂಡು ಹಾರಿಸಿ ಸಚಿವರನ್ನು ಸ್ವಾಗತ

ಯಾದಗಿರಿಯಲ್ಲಿ ಸಚಿವ ಭಗವಂತ ಖೂಬಾ ಅವರ ಜನಾಶಿರ್ವಾದ ಯಾತ್ರೆಯಲ್ಲಿ ನಾಡ ಪಿಸ್ತೂಲ್​​​​​ನಿಂದ ಗುಂಡು ಹಾರಿಸಿ ಅವರನ್ನು ಸ್ವಾಗತ ಮಾಡಿದ್ದಾರೆ. ಇದು ಬಿಜೆಪಿಯ ಗೂಂಡಾ ಹಾಗೂ ತಾಲಿಬಾನ್ ಸಂಸ್ಕೃತಿಯನ್ನು ಬಟಾ ಬಯಲು ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Eshwara Khandre
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ
author img

By

Published : Aug 19, 2021, 5:46 PM IST

ಕಲಬುರಗಿ: ಬಂದೂಕಿನಿಂದ ಗುಂಡು ಹಾರಿಸಿ ಸಚಿವರನ್ನು ಸ್ವಾಗತ ಮಾಡಿಕೊಂಡಿದ್ದು, ಬಿಜೆಪಿಯ ಗೂಂಡಾ ಹಾಗೂ ತಾಲಿಬಾನ್ ಸಂಸ್ಕೃತಿ ಬಟಾ ಬಯಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾದಗಿರಿಯಲ್ಲಿ ಸಚಿವ ಭಗವಂತ ಖೂಬಾ ಅವರ ಜನಾಶಿರ್ವಾದ ಯಾತ್ರೆಯಲ್ಲಿ ನಾಡ ಪಿಸ್ತೂಲ್​​​​​​ನಿಂದ ಗುಂಡು ಹಾರಿಸಿ ಸ್ವಾಗತ ಮಾಡಿದ್ದಾರೆ. ಹಾರ, ಶಾಲು, ಬಾಜಾ ಭಜಂತ್ರಿಯಿಂದ ಸ್ವಾಗತ ಮಾಡಲಾಗಿದೆ. ಕರ್ನಾಟಕದ ಶ್ರೀಮಂತ ಸಂಸ್ಕೃತಿಗೆ ಕಪ್ಪು ಚುಕ್ಕೆ ಬರುವ ರೀತಿ ಖೂಬಾ ಮಾಡಿದ್ದಾರೆ. ಇದು ಅತ್ಯಂತ ಅಕ್ಷಮ್ಯ ಅಪರಾಧ ಎಂದು ಖಂಡ್ರೆ ದೂರಿದರು‌.

ಬಿಜೆಪಿ ರಾಜ್ಯದಲ್ಲಿ ಗೂಂಡಾ ಸಂಸ್ಕೃತಿ ತರಲು ಹೊರಟಿದೆಯಾ?

ಬಿಜೆಪಿ ರಾಜ್ಯದಲ್ಲಿ ಗೂಂಡಾ ಸಂಸ್ಕೃತಿ ತರಲು ಹೊರಟಿದೆಯಾ ಅಂತ ಜನರು ಪ್ರಶ್ನೆ ಮಾಡ್ತಿದ್ದಾರೆ. ಬಂದೂಕುಗಳಿಗೆ ಪರವಾನಗಿ ಇತ್ತೇ? ಸಾರ್ವಜನಿಕ ಸ್ಥಳದಲ್ಲಿ ಬಂದೂಕು ತರಲು ಅನುಮತಿ ಇತ್ತಾ? ಹಾಗೂ ಗುಂಡೇಟಿನಿಂದ ಯಾರಾದರು ಮೃತಪಟ್ಟಿದ್ದರೆ ಯಾರು ಹೊಣೆ? ಇದು ಯಾರ ಕುಮ್ಮಕ್ಕಿನಿಂದ ಆಗಿದೆ ? ಪೊಲೀಸ್ ಇಲಾಖೆ ಏನು ಮಾಡ್ತಿದೆ ಎಂದು ಖಂಡ್ರೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಯಾವ ಪುರುಷಾರ್ಥಕ್ಕೆ ಜನಾಶಿರ್ವಾದ ಯಾತ್ರೆ?

ಕೋವಿಡ್​ನಿಂದ ಜನರು ಸಂಕಷ್ಟದಲ್ಲಿದ್ದಾರೆ. ಪ್ರವಾಹದಿಂದ ಜನರು ಕಷ್ಟದಲ್ಲಿ ಸಿಲುಕಿ ನರಳಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದಕ್ಕಾಗಿ ಸಂಭ್ರಮಾಚರಣೆ ಮಾಡ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಚಿವರು ಎಲ್ಲಿದ್ರು? ಕೋವಿಡ್​ನಿಂದ ಮೃತಪಟ್ಟವರ ಮನೆಗೆ ಹೋಗಿ ಸಾಂತ್ವನ ಹೇಳಿದ್ರಾ? ಇಂತಹವರಿಗೆ ಜನರು ಆಶೀರ್ವಾದ ಮಾಡಬೇಕಾ? ಜನಾಶೀರ್ವಾದ ಯಾತ್ರೆ ಹೆಸರಿನಲ್ಲಿ ಮಜಾ ಮಾಡಲು ಹೊರಟಿದ್ದಾರೆ. ಇಂತವರ ಬಗ್ಗೆ ಜನ ಸಿಡಿದೆಳುವ ಸಮಯ ಬಂದಿದೆ ಎಂದು ಕೇಂದ್ರ ಸಚಿವ ಭಗವಂತ ಖೂವಾ ವಿರುದ್ದ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಯಾದಗಿರಿ: ಬಂದೂಕಿನಿಂದ ಗುಂಡು ಹಾರಿಸಿ ಕೇಂದ್ರ ಸಚಿವರಿಗೆ ಭರ್ಜರಿ ಸ್ವಾಗತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.