ಯಾದಗಿರಿ : ವಿಕಲಚೇತನರಿಗೆ ಕೃತಕ ಉಪಕರಣ, ತ್ರಿಚಕ್ರ ಸೈಕಲ್, ವ್ಹೀಲ್ ಚೇರ್ ಹಾಗೂ ಅಗತ್ಯ ಉಪಕರಣಗಳನ್ನು ವಿತರಣೆ ಮಾಡಲಾಯಿತು.
ಇಲ್ಲಿನ ಜೈನ್ ಮಂದಿರದ ಹಿಂಭಾಗದ ಬಾಲಮಂದಿರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಮಂಗಳೂರು ರಿಫೈನರಿ ಎಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್ ವತಿಯಿಂದ ವಿಕಲಚೇತನರಿಗೆ ಕೃತಕ ಉಪಕರಣ ವಿತರಣೆ ಮಾಡಲಾಯಿತು.
ಜಿಲ್ಲೆಯಲ್ಲಿ ಒಟ್ಟು 50 ಲಕ್ಷ ರೂ. ಮೌಲ್ಯದ 506 ವಿಕಲಚೇತರಿಗೆ ಉಪಕರಣಗಳನ್ನು ನೀಡಲಾಗುತ್ತಿದೆ. ತ್ರಿಚಕ್ರ ಸೈಕಲ್, ಕಿವಿ ಸಲಕರಣೆ, ವ್ಹೀಲ್ ಚೆರ್ ಹಾಗೂ ಇನ್ನಿತರ ಉಪಕರಣ ವಿತರಣೆ ಮಾಡಲಾಗಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಹಂತಹಂತವಾಗಿ ಮತ್ತೆ ಸಲಕರಣೆಗಳನ್ನು ನೀಡಲಾಗುತ್ತದೆ ಎಂದು ಎಂಆರ್ಪಿಎಲ್ ಕಂಪನಿಯ ವ್ಯವಸ್ಥಾಪಕ ಸುಬ್ಬರಾಯ ಭಟ್ಟ ತಿಳಿಸಿದರು.
ಇಂದು ಸಾಂಕೇತಿಕವಾಗಿ 51 ವಿಕಲಚೇತನರಿಗೆ ಸಲಕರಣೆಗಳನ್ನು ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಉಳಿದ ವಿಕಲಚೇತನರಿಗೆ ಸಲಕರಣೆಗಳನ್ನು ನೀಡಲಾಗುವದು ಎಂದು ಇದೇ ವೇಳೆ ತಿಳಿಸಿದ್ದಾರೆ.