ETV Bharat / state

ಹೆರಿಗೆ ನೋವಿನಿಂದ ಬಳಲಿದ್ದ ಮಹಿಳೆಗೆ ಚಿಕಿತ್ಸೆ ನೀಡದೇ ವೈದ್ಯರ ನಿಷ್ಕಾಳಜಿ... ಗರ್ಭಿಣಿಗೆ ಸಂಕಷ್ಟ - ಯಾದಗಿರಿ ಲೇಟೆಸ್ಟ್​ ನ್ಯೂಸ್

ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಹೋತಪೇಟೆ ಮೇಲಿನ ತಾಂಡಾದ ಗರ್ಭಿಣಿಯೊಬ್ಬರು ಹೆರಗೆ ನೋವಿನಿಂದ ಬಳಲಿ ಆಸ್ಪತ್ರೆಗೆ ಸೇರಿಸಿದರೂ ವೈದ್ಯರು ಚಿಕಿತ್ಸೆ ನೀಡದೇ ಅಮಾನವೀಯತೆ ಮೆರದಿರುವ ಘಟನೆ ನಡೆದಿದೆ.

Doctors not given proper treatment to pregnant women in Yadgiri
ಹೆರಿಗೆ ನೋವಿನಿಂದ ಬಳಲಿದ್ದ ಗರ್ಭಿಗೆ ಚಿಕಿತ್ಸೆ ನೀಡದೆ ಅಮಾನವೀಯತೆ ಮೆರದ ವೈದ್ಯರು
author img

By

Published : May 18, 2020, 7:45 PM IST

ಯಾದಗಿರಿ : ಕ್ವಾರಂಟೈನ್ ಕೇಂದ್ರದಲ್ಲಿ ಹೆರಿಗೆ ನೋವಿನಿಂದ ಒದ್ದಾಡಿದ್ದ ಗರ್ಭಿಣಿಗೆ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಲು ಮುಂದಾಗದೇ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹೆರಿಗೆ ನೋವಿನಿಂದ ಬಳಲಿದ್ದ ಗರ್ಭಿಣಿಗೆ ಚಿಕಿತ್ಸೆ ನೀಡದೇ ಅಮಾನವೀಯತೆ ಮೆರದ ವೈದ್ಯರು

ಜಿಲ್ಲೆಯ ಶಹಪುರ ತಾಲೂಕಿನ ಹೋತಪೇಟೆ ಮೇಲಿನ ತಾಂಡಾದ ಕವಿತಾ ಎಂಬ ಗರ್ಭಿಣಿ ತನ್ನ ಕುಟುಂಬಸ್ಥರೊಂದಿಗೆ ಕಳೆದ ಐದು ದಿನಗಳ ಹಿಂದೆ ಮಹಾರಾಷ್ಟ್ರದ ಪುಣೆಯಿಂದ ಜಿಲ್ಲೆಗೆ ಆಗಮಿಸಿದ್ದರು. ಇವರನ್ನು ಶಹಪುರ ತಾಲೂಕಿನ ಭೀಮರಾಯನ ಬಳಿಯ ಕೇಂದ್ರದಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು.

ಏಳು ತಿಂಗಳ ಗರ್ಭಿಣಿ ಕವಿತಾ ಕಳೆದ ರಾತ್ರಿ ಕ್ವಾರೆಂಟೈನ್ ಕೇಂದ್ರದಲ್ಲಿ ಹೆರಿಗೆ ನೋವಿನಿಂದ ನರಳಾಡಿದ್ದು, ಅಲ್ಲಿಯ ಸಿಬ್ಬಂದಿ ಕೋಣೆಯ ಬಾಗಿಲು ತೆರೆಯದೇ ನಿರ್ಲಕ್ಷ ತೋರಿದ್ದಾರೆ. ಇಂದು ಬೆಳಗ್ಗೆ ರಕ್ತಸ್ರಾವದಿಂದ ಬಳಲುತ್ತಿದ್ದ ಕವಿತಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಚಿಕಿತ್ಸೆಗೆ ವೈದ್ಯರು ಮುಂದೆ ಬಾರದೇ ಅಮಾನವೀಯವಾಗಿ ನಡೆದುಕೊಳ್ಳುವ ಮೂಲಕ ನಿರ್ಲಕ್ಷ್ಯ ತೋರಿದ್ದಾರೆ.

ರಕ್ತಸ್ರಾವದಿಂದ ನರಳಾಡುತ್ತಿದ್ದ ಕವಿತಾಗೆ ಚಿಕಿತ್ಸೆ ನೀಡುವಂತೆ ಆಕೆಯ ಸಂಬಂಧಿಕರು ಪರಿ ಪರಿಯಾಗಿ ಕೇಳಿದರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಚಿಕಿತ್ಸೆಗೆ ಮುಂದಾಗಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಬೆಳಗ್ಗೆ ೧೧ ಗಂಟೆಯಿಂದ ಸಾಯಾಂಕಾಲ ೪ ಗಂಟೆ ವರೆಗೆ ಗರ್ಭಿಣಿ ಕವಿತಾಗೆ ಚಿಕಿತ್ಸೆ ನೀಡದೆ ಕಾಲಹರಣ ಮಾಡಿ ಕೊನೆಗೆ ಕಲಬುರಗಿ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡುವ ಮೂಲಕ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ ಎಂದು ಕವಿತಾ ಸಂಬಂಧಿಗಳು ಆಸ್ಪತ್ರೆ ಆಡಳಿತ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.