ಗುರುಮಠಕಲ್ (ಯಾದಗಿರಿ): ನಗರದಲ್ಲಿ ಕಲುಷಿತ ನೀರನ್ನು ಪೂರೈಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕುಡಿಯುವ ನೀರು ಸರಬರಾಜು ಮಾಡುವ ಗುರುಮಠಕಲ್ ಕೆರೆಯಲ್ಲಿ ಕಲುಷಿತ ನೀರು ಶೇಖರಣೆಗೊಂಡಿದ್ದು, ಕೆರೆಯಲ್ಲಿರುವ ಬೋರ್ವೆಲ್ನ ಕೇಸಿಂಗ್ ಪೈಪ್ ಮುಖಾಂತರ ಕೆರೆಯ ನೀರು ಬೋರ್ವೆಲ್ ಒಳಗೆ ಹೋಗುತ್ತದೆ. ಅದೇ ನೀರನ್ನು ಗುರುಮಠಕಲ್ ಪಟ್ಟಣದ ಬಡಾವಣೆಗಳಿಗೆ ಸರಬರಾಜು ಮಾಡಲಾಗುತ್ತದೆ ಎನ್ನಲಾಗಿದೆ.
ಪುರಸಭೆಯು ಈ ಕಲುಷಿತ ನೀರನ್ನು ಶುದ್ಧೀಕರಿಸದೆ ಅಥವಾ ಯಾವುದೇ ರೀತಿಯ ರಾಸಾಯನಿಕ ಬಳಸದೆ ನೇರವಾಗಿ ಸರಬರಾಜು ಮಾಡುತ್ತಿರುವುದರಿಂದ ಜನರು ಕಾಯಿಲೆಗಳಿಗೆ ತುತ್ತಾಗುವ ಭೀತಿ ಎದುರಾಗಿದೆ.