ETV Bharat / state

ಅವಧಿ ಮುಗಿದ 'ಮದ್ಯ' ನಾಶಪಡಿಸಿದ ಅಬಕಾರಿ ಇಲಾಖೆ

author img

By

Published : Sep 18, 2020, 7:23 PM IST

ಯಾದಗಿರಿ ನಗರದಲ್ಲಿ ಮಾರಾಟವಾಗದೆ ಅವಧಿ ಮುಗಿದಿದ್ದ ಮದ್ಯವನ್ನು ಅಬಕಾರಿ ಇಲಾಖೆಯ ನೇತೃತ್ವದಲ್ಲಿ ನಾಶ ಮಾಡಲಾಗಿದೆ.

Destruction of expired liquor in yadgiri
ಅವಧಿ ಮುಗಿದ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆ

ಯಾದಗಿರಿ: ನಗರದ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಮದ್ಯ ಸಂಗ್ರಹ ಆವರಣದಲ್ಲಿ ಮಾರಾಟವಾಗದೆ ಅವಧಿ ಮುಗಿದಿದ್ದ 16 ಲಕ್ಷ ಮೌಲ್ಯದ ಮದ್ಯವನ್ನು ನಾಶ ಪಡಿಸಲಾಯಿತು.

ಮಾರಾಟವಾಗದ ನಾಕ್ ಔಟ್ ಕಂಪನಿಯ ಪೋಸ್ಟರ್ ಗೋಲ್ಡ್​​ , ಲಾಗರ್ ಹಾಗೂ ನಾಕೌಟ್ ಸ್ಟ್ರಾಂಗ್‌ನ ಒಟ್ಟು 1028 ಬಾಕ್ಸ್ ಗಳ ಬಿಯರ್ ಬಾಟಲ್ ಗಳನ್ನ ಅಬಕಾರಿ ಇಲಾಖೆಯ ಉಪ ನೀರಿಕ್ಷಕರಾದ ಶ್ರೀರಾಮ್ ರಾಠೋಡ್, ಮಳಿಗೆ ಅಬಕಾರಿ ನಿರೀಕ್ಷಕ ಪ್ರಕಾಶ ಮಾಕೊಂಡ ನೇತೃತ್ವದ ತಂಡ ಗುಂಡಿ ತೆಗೆದು ಅದರಲ್ಲಿ ಮದ್ಯವನ್ನು ಸುರಿದು ನಂತರ ಮಣ್ಣು ಮುಚ್ಚಿದರು.

ಅವಧಿ ಮುಗಿದ 'ಮದ್ಯ' ನಾಶಪಡಿಸಿದ ಅಬಕಾರಿ ಇಲಾಖೆ

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ್ ರಾಠೋಡ್, ಅವಧಿ ಮುಗಿದ ಮದ್ಯವನ್ನು ಸಾರ್ವಜನಿಕರಿಗೆ, ಜಾನುವಾರಗಳಿಗೆ ಹಾಗೂ ಪರಿಸರಕ್ಕೆ ತೊಂದರೆಯಾಗದಂತೆ ಇಲಾಖೆಯಿಂದ ಅಗತ್ಯ ಮುಂಜಾಗ್ರತ ಕ್ರಮ ಕೈಗೊಂಡು ನಾಶಪಡಿಸಲಾಗಿದೆಯೆಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಳಿಗೆ ವ್ಯವಸ್ಥಾಪಕ ವಿ.ಡಿ.ವೇಂಕಟೇಶ, ಸಹಾಯಕ ವ್ಯವಸ್ಥಾಪಕ ಅಡಿವೆಪ್ಪ ಭಜಂತ್ರಿ, ಎಮ್.ಎಸ್.ಪಾಟೀಲ್, ಶಿವರಾಜ್ ಕುಮಾರ್ ಮುಂಡರಗಿಮಠ, ದೇವಿಂದ್ರ ಗೋನಾಳ, ಹತ್ತಿಕುಣಿ ನಾಡ ಕಚೇರಿ ಉಪ ತಹಶೀಲ್ದಾರ್ ಬಸವರಾಜ, ಗ್ರಾಮ ಲೆಕ್ಕಿಗ ಬಸಪ್ಪ ವಾಲಿ , ಕಂಪನಿಯ ಪ್ರತಿನಿಧಿ ಶಿವಕುಮಾರ ಹೇರೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.