ETV Bharat / state

ಕೋಡಿಬಿದ್ದ ಕೆರೆ.. ಮಿನಾಸಪೂರದಲ್ಲಿ 100 ಎಕರೆಯಲ್ಲಿನ ಭತ್ತ ನೀರುಪಾಲು - ಗುರುಮಠಕಲ್

ಗುರುಮಠಕಲ್ ತಾಲೂಕಿನ ಸುರಿಯುತ್ತಿರುವ ಮಳೆಗೆ ಮಿನಾಸಪೂರ ಕೆರೆ ಸಂಪೂರ್ಣ ಭರ್ತಿಯಾಗಿ, ಕೋಡಿಬಿದ್ದಿದೆ. ಕೆರೆ ನೀರು ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನೀರು ಪಾಲಾಗಿದೆ.

Destroy 100 acres of paddy
ಮಿನಾಸಪೂಮಿನಾಸಪೂರ ಕೆರೆಯ ಹೆಚ್ಚುವರಿ ನೀರಿಗೆ 100 ಎಕರೆ ಭತ್ತ ನೀರುಪಾಲುರ ಕೆರೆಯ ಹೆಚ್ಚುವರಿ ನೀರಿಗೆ
author img

By

Published : Sep 22, 2020, 10:37 AM IST

ಗುರುಮಠಕಲ್: ತಾಲೂಕಿನ ಮಿನಾಸಪೂರ ಗ್ರಾಮದ ಹೊರವಲಯದ ಕೆರೆ ಕೋಡಿಬಿದ್ದು ಹೆಚ್ಚುವರಿ ನೀರು ಭತ್ತದ ಗದ್ದೆಗೆ ನುಗ್ಗಿ ಸುಮಾರು 100 ಎಕರೆ ಭತ್ತ ನೀರು ಪಾಲಾಗಿದೆ.

ಮಿನಾಸಪೂರ ಕೆರೆಯ ಹೆಚ್ಚುವರಿ ನೀರಿಗೆ 100 ಎಕರೆ ಭತ್ತ ನೀರುಪಾಲು..

ಕೆರೆಯು ಭರ್ತಿಯಾಗಿ ಈಗ ಕೆರೆ‌ ಕೊಡಿಯಿಂದ ನೀರು ಜಮೀನಿಗೆ ನುಗ್ಗುತಿದ್ದು, ಭತ್ತ ಹಾಗೂ ಹತ್ತಿ ಬೆಳೆ ಸಂಪೂರ್ಣ ಜಲಾವೃತವಾಗಿದೆ. 11 ವರ್ಷದ ನಂತರ ಕೆರೆ ಭರ್ತಿಯಾಗಿ ಜಮೀನಿಗೆ ನೀರು ನುಗ್ಗಿದೆ. ಕಳೆದ 2009ರ ಪ್ರವಾಹ ಸಂದರ್ಭದಲ್ಲಿ ಮಿನಾಸಪುರ ಕೆರೆ ಅವಾಂತರದಿಂದ ಬೆಳೆ ಹಾನಿಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಖುದ್ದು ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಜಮೀನಿಗೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಪತ್ರ ಬರೆದಿದ್ದರು. ಆದರೆ 11 ವರ್ಷ ಗತಿಸಿದರು ಯಾವುದೇ ಸಮಸ್ಯೆ ಪರಿಹಾರವಾಗಿಲ್ಲ.

ಈ ಬಾರಿಯ ಉತ್ತಮವಾಗಿ ಸುರಿದ ಮುಂಗಾರು ಮಳೆ ಹಾಗೂ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿ-ಜಿಟಿ ಮಳೆ ಮಳೆಯಿಂದಾಗಿ ಗುರುಮಠಕಲ್ ತಾಲೂಕಿನ ಮಿನಾಸಪೂರ ಕೆರೆ ತುಂಬಿ ಹೆಚ್ಚಾದ ನೀರು ಪಕ್ಕದ ಭತ್ತದ ಗದ್ದೆಗೆ ನುಗ್ಗಿದೆ. ಇದರಿಂದ ರೈತರು ಕಣ್ಣೀರು ಹಾಕುವಂತಾಗಿದೆ. ಹಿಂದಿನ ಕಾಲದಲ್ಲಿ ಕೆರೆಗಳನ್ನು ನಿರ್ಮಿಸುವಾಗ ಕೆರೆಗಳು ತುಂಬಿದ ನಂತರ ನೀರು ಹಳ್ಳಗಳ ಮೂಲಕ ಮುಂದೆ ಸಾಗುತ್ತಾ, ಅನಪೂರ, ಇಡ್ಲೂರು ಕೆರೆಗಳನ್ನು ತುಂಬುತ್ತಾ ಕೊನೆಗೆ ಚಲ್ಹೇರಿ ಗ್ರಾಮದ ನಂತರ ದೊಡ್ಡ ಹಳ್ಳಕ್ಕೆ ಸೇರುವಂತೆ ವ್ಯವಸ್ಥೆಯಿತ್ತು. ಆದರೆ ಆ ಹಳ್ಳಗಳಲ್ಲಿ ಈಗ ನೀರು ಸರಾಗವಾಗಿ ಹರಿಯುವುದಕ್ಕೆ ಸಾಧ್ಯವಿಲ್ಲದಂತಾಗಿರುವುದರಿಂದ ಕೆರೆ ತುಂಬಿದ ನಂತರ ಹಳ್ಳಗಳಿಂದ ನೀರು ಜಮೀನಿಗೆ ನುಗ್ಗುತ್ತಿದೆ ಎಂದು ರೈತ ಹಣಮಂತ ಕುಂಬಾರ ಸಮಸ್ಯೆಯನ್ನು ಕುರಿತು ವಿವರಿಸಿದರು.

ಕಳೆದ 10 ವರ್ಷಗಳ ಹಿಂದೆ ಇಂತಹದ್ದೇ ಸಮಸ್ಯೆಯಾದಾಗ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಿದ ಸರ್ಕಾರ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನವನ್ನು ನೀಡಿತ್ತು. ಇನ್ನೇನು ಸಮಸ್ಯೆ ಪರಿಹಾರವಾಯ್ತು ಎಂದೇ ಎಲ್ಲರೂ ಭಾವಿಸಿದ್ದೆವು. ಆದರೆ ಜಿಲ್ಲಾ ಪಂಚಾಯತ್​, ಜಲನಯನ, ಸಣ್ಣ ನೀರಾವರಿ, ನೀರಾವರಿ ಸೇರಿದಂತೆ ಇಲಾಖೆಗಳು ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನುಣುಚಿಕೊಂಡವು. ಈಗಲಾದರೂ ಯಾವುದೋ ಒಂದು ಇಲಾಖೆ ಸಮಸ್ಯೆಯನ್ನು ಬಗೆಹರಿಸುವತ್ತ ಮುಂದಾಗಬೇಕು ಎಂದು ರೈತರಾದ ತಿಮ್ಮಪ್ಪ ಬೋಯಿನ್, ಚಂದಪ್ಪ, ನಾಗಪ್ಪ ಮನವಿ ಮಾಡಿದ್ದಾರೆ.

ಕೆರೆ ತುಂಬಿ ನೀರು ಹರಿದ ಪರಿಣಾಮ ಉತ್ತಮವಾದ ಫಸಲನ್ನು ನೀಡಬೇಕಿದ್ದ ಭತ್ತದ ಗದ್ದೆಗಳು ಈಗ ಸಂಪೂರ್ಣ ಜಲಾವೃತವಾಗಿವೆ. ನಾವು ಕಷ್ಟಪಟ್ಟು ಬೆಳೆದ ಬೆಳೆ ಹೀಗೆ ನೀರುಪಾಲಾಗಿದ್ದು, ನಮ್ಮ ಸಮಸ್ಯೆಯನ್ನು ಪರಿಹರಿಸುವತ್ತ ಇಲಾಖೆಗಳು ನಿಧಾನಗತಿ ಅನುಸರಿಸಿದ್ದರಿಂದ ಇಂದು ನಾವೆಲ್ಲಾ ಸಂಕಷ್ಟಕ್ಕೆ ಸಿಲಿಕಿದ್ದೇವೆ ಎಂದು ರೈತ ಭೀಮಶಂಕರ್​ ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.