ಯಾದಗಿರಿ: ಜಿಲ್ಲೆಯ ಕಕ್ಕೇರಾ ಗ್ರಾಮವನ್ನು ತಾಲೂಕು ಘೋಷಣೆ ಕುರಿತಂತೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ತಾಲೂಕು ರಚನೆಗೆ ರಾಜ್ಯ ಹೈಕೋರ್ಟ್ ಸೂಚನೆ ನೀಡಲಾಗಿದ್ರೂ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಗ್ರಾಮಸ್ಥರಾದ ಚಂದ್ರಕಾಂತ್ ಕಕ್ಕೆರಾ ಹಾಗೂ ಪರಮಣ್ಣ ಆರೋಪಿಸಿದ್ದಾರೆ.
ಕಕ್ಕೇರಾ ಗ್ರಾಮವನ್ನು ತಾಲೂಕಾಗಿ ಘೋಷಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಆದ್ರೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವಾಗ ಕಕ್ಕೆರಾ ಗ್ರಾಮದ ಹೆಸರನ್ನು ಕೈಬಿಡಲಾಗಿದೆ. ಅಧಿಕಾರಿಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದರ ಜೊತೆಗೆ ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲವೆಂದು ದೂರಿದರು.
ಒಂದು ಲಕ್ಷ ಜನಸಂಖ್ಯೆ ಹೊಂದಿರುವ ಕಕ್ಕೆರಾ ಗ್ರಾಮ ಸುರಪುರ ತಾಲೂಕಿಗೆ ಒಳಪಟ್ಟಿದ್ದು, 40ಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಂಡಿದೆ. ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಗ್ರಾಮ ಇದಾಗಿದ್ದು, ತಾಲೂಕಾಗಿ ಆಡಳಿತ ನಡೆಸುವ ಎಲ್ಲಾ ಮಾನದಂಡಗಳನ್ನು ಹೊಂದಿದೆ ಎಂದರು.