ETV Bharat / state

ಸಿಲಿಂಡರ್ ಸ್ಫೋಟ: ಮಗಳ ಮದುವೆಗೆಂದು ಇಟ್ಟಿದ್ದ ಹಣ, ಚಿನ್ನಾಭರಣ ಸುಟ್ಟು ಭಸ್ಮ - ಯಾದಗಿರಿಯ ಗುರುಮಠಕಲ್​ನಲ್ಲಿ ಸಿಲಿಂಡರ್​ ಸ್ಫೋಟ

ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ಬೆಂಕಿಗೆ ಆಹುತಿಯಾದ ಘಟನೆ ಯಾದಗಿರಿಯ ಗುರುಮಠಕಲ್​ ತಾಲೂಕಿನ ಚಂಡರಿಕೆ ಗ್ರಾಮದಲ್ಲಿ ನಡೆದಿದೆ.

ಸಿಲಿಂಡರ್ ಸ್ಫೋಟ
ಸಿಲಿಂಡರ್ ಸ್ಫೋಟ
author img

By

Published : May 1, 2022, 8:41 PM IST

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡರಿಕಿ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಹಣ ಮತ್ತು ಬಂಗಾರದ ಆಭರಣಗಳು ಸುಟ್ಟು ಕರಕಲಾಗಿರುವ ಘಟನೆ ಭಾನುವಾರ ಜರುಗಿದೆ. ಮನೆಯ ಮಾಲೀಕರಾದ ಶ್ರೀನಿವಾಸ್ ರೆಡ್ಡಿ ಗವಿನೊಳ ಅವರು ತಮ್ಮ ಮಗಳ ಮದುವೆಗೆಂದು ಸಾಲ ಮಾಡಿ ಮನೆಯಲ್ಲಿ 3 ಲಕ್ಷ ನಗದು ಮತ್ತು 10 ತೊಲೆ ಬಂಗಾರ ಆಭರಣಗಳನ್ನು ಇಟ್ಟಿದ್ದರು. ಅವು ಬೆಂಕಿಗೆ ಆಹುತಿಯಾಗಿವೆ.

ಗುರುಮಠಕಲ್ ತಾಲೂಕಿನ ಚಂಡರಿಕಿ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟ

ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಡುಗೆ ಮನೆಯಲ್ಲಿ ಬೆಳಗ್ಗೆ ಚಹಾ ಮಾಡಲು ಸಿಲಿಂಡರ್ ಆನ್ ಮಾಡಿದಾಗ ಅನಿಲ ಸೋರಿಕೆಯಾಗಿರುವ ಹಿನ್ನೆಲೆ ಬೆಂಕಿ ತಗುಲಿದೆ ಎಂದು ತಿಳಿದು ಬಂದಿದೆ. ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಾವೇರಿ ಕಸಾಪ ಸರ್ವಸದಸ್ಯರ ಸಭೆಯಲ್ಲಿ ಗಲಾಟೆ - ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.