ಯಾದಗಿರಿ: ಕಳೆದ 15 ದಿನಗಳ ಹಿಂದೆ ನಗರದ ಜಿಲ್ಲಾಸ್ಪತ್ರೆಯಲ್ಲಿ ರಾಮಸಮುದ್ರ ಗ್ರಾಮದ ಪದ್ಮಾ ನಾಗರಾಜ ಬೈಲಪತ್ತರ್ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ರು. ಈ ಮಕ್ಕಳಿಗೆ ಎದೆಹಾಲು ಸಾಕಾಗುವುದಿಲ್ಲ ಎಂದು ದಾನಿಯೊಬ್ಬರು 3 ಹಸುಗಳನ್ನು ಈ ಕುಟುಂಬಕ್ಕೆ ನೀಡಿದ್ದಾರೆ.
ಜಿ.ಪಂ. ಮಾಜಿ ಉಪಾಧ್ಯಕ್ಷ ಶರಣಕುಮಾರ ದೋಕಾ ಸೈದಾಪುರ್ ಎಂಬುವರು ಈ ಕುಟುಂಬಕ್ಕೆ ಇಂದು ಗೋದಾನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಏಕಕಾಲದಲ್ಲಿ ಮೂರು ಮಕ್ಕಳ ಜನ್ಮದಿಂದ ಮಕ್ಕಳಿಗೆ ತಾಯಿ ಎದೆಹಾಲು ಸಾಕಾಗುತ್ತಿಲ್ಲ ಎಂಬ ಸುದ್ದಿ ತಿಳಿದು ಅವರು 15 ಸಾವಿರ ಖರ್ಚು ಮಾಡಿ ಕಣೆಕಲ್ ಗ್ರಾಮದ ರೈತನ ಬಳಿ ಗೋವು ಖರೀದಿಸಿ ತ್ರಿವಳಿ ಜನ್ಮ ನೀಡಿದ ಪದ್ಮಾ ನಾಗರಾಜ ಕುಟುಂಬಕ್ಕೆ ನೀಡಿದ್ದಾರೆ.
ನಾಗರಾಜ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿ ಗೋ ಮಾತೆಗೆ ಶ್ರದ್ಧ ಭಕ್ತಿಯಿಂದ ಪೂಜೆ ಸಲ್ಲಿಸಿ ಕುಟುಂಬದ ಮಕ್ಕಳ ಕ್ಷೇಮಕ್ಕಾಗಿ ಗೋವು ನೀಡಿದ ದೋಕಾ ಅವರ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದರು. ಇನ್ನು ಬಡತನದಲ್ಲಿದ್ದ ಈ ಕುಟುಂಬಕ್ಕೆ ಈ ಹಿಂದೆ ಖ್ಯಾತ ಬಹುಭಾಷಾ ಬಾಲಿವುಡ್ ಖಳನಟ ಸೋನು ಸೂದ್ ಕೂಡ ಸಹಾಯ ಹಸ್ತ ನೀಡಿದ್ದರು.