ETV Bharat / state

ಕೊರೊನಾ ವಾರಿಯರ್ಸ್ ಆಗಿ ಶ್ರಮಿಸಿದವರಿಗೆ ಕರವೇ ಗೌರವ! - ಸುರಪುರ ಕೊರೊನಾ ವಾರಿಯರ್ಸ್ ಸನ್ಮಾನ

ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಮತ್ತು ಗ್ರಾಮ ಪಂಚಾಯತ್‌ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಸನ್ಮಾನಿಸಿ ಫಲಹಾರ ನೀಡಿ ಧನ್ಯತಾಭಾವ ಮೆರೆದರು.

Yadagiri corona virus updates
Yadagiri corona virus updates
author img

By

Published : May 31, 2020, 3:53 PM IST

ಸುರಪುರ : ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಕ್ವಾರಂಟೈನ್ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್‌ಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅಭಿನಂದಿಸಲಾಯಿತು.

ಕ್ವಾರಂಟೈನ್‌ಲ್ಲಿ ನಿರಂತರ ಸೇವೆ ಸಲ್ಲಿಸುವ ಜೊತೆಗೆ ಗ್ರಾಮದ ಜನರಿಗೆ ಸೋಂಕು ತಗುಲದಂತೆ ಮುಂಜಾಗ್ರತೆ ವಹಿಸಲು ನಿರಂತರ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್‌ಗೆ ಕರವೇ ಕಾರ್ಯಕರ್ತರು ಸನ್ಮಾನಿಸಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಮತ್ತು ಗ್ರಾಮ ಪಂಚಾಯತ್‌ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಸನ್ಮಾನಿಸಿ ಫಲಹಾರ ನೀಡಿ ಧನ್ಯತಾಭಾವ ಮೆರೆದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಸಿದ್ದಣ್ಣ ಬಾಳಿ ಮಾತನಾಡಿ, ಇಂದು ನಾವೆಲ್ಲರೂ ಕೋವಿಡ್‌ನಿಂದ ದೂರವಿರಲು ಕೊರೊನಾ ವಾರಿಯರ್ಸ್ ಕಾರಣ. ಅವರು ತಮ್ಮ ಜೀವದ ಹಂಗು ತೊರೆದು ನಮಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಬರೀ ಗೌರವಿಸುವುದು ಮಾತ್ರವಲ್ಲ, ನಿರಂತರ ಸ್ಮರಿಸಬೇಕೆಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.