ETV Bharat / state

ಯಾದಗಿರಿಗೆ ಮಹರಾಷ್ಟ್ರದಿಂದ ಬಂದಿದ್ದ 7 ಮಂದಿಗೆ ಕೊರೊನಾ: 163ಕ್ಕೆ ಏರಿದ ಸೋಂಕಿತರ ಸಂಖ್ಯೆ - Corona virus infection

ಯಾದಗಿರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಮಹರಾಷ್ಟ್ರದಿಂದ ವಾಪಸ್ ಆದ 7 ಜನರಿಗೆ ಸೋಂಕು ದೃಢಪಟ್ಟಿದೆ.

yadgiri
ಯಾದಗಿರಿ
author img

By

Published : May 28, 2020, 3:25 PM IST

ಯಾದಗಿರಿ: ಮಹರಾಷ್ಟ್ರದಿಂದ ವಾಪಸ್ ಆದ 7 ಜನರಿಗೆ ಇಂದು ಮತ್ತೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿರುವುದರಿಂದ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಮಹರಾಷ್ಟ್ರದ ನಂಜು ಜಿಲ್ಲೆಗೆ ಬೆಂಬಿಡದೆ ಕಾಡುತ್ತಿದೆ. ನಿನ್ನೆಯವರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 156 ಇದ್ದು, 69 ವರ್ಷದ ವೃದ್ಧೆಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಮತ್ತೆ ಇಂದು 8 ಮತ್ತು 11 ವರ್ಷದ ಬಾಲಕರಿಬ್ಬರು ಸೇರಿದಂತೆ 7 ಜನ ವಲಸೆ ಕಾರ್ಮಿಕರಲ್ಲಿ ಕೊರೊನಾ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ.

28 ವರ್ಷದ ವ್ಯಕ್ತಿ ಪಿ-2475, 24 ವರ್ಷದ ಯುವಕ ಪಿ-2476, 28 ವರ್ಷದ ವ್ಯಕ್ತಿ ಪಿ-2477, 24 ವರ್ಷದ ಮಹಿಳೆ ಪಿ-2478, 8 ವರ್ಷದ ಬಾಲಕ ಪಿ-2479, 45 ವರ್ಷದ ವ್ಯಕ್ತಿ ಪಿ-2480 ಸೇರಿದಂತೆ 11 ವರ್ಷದ ಬಾಲಕ ಪಿ-2481 ಇಂದು ಕೊರೊನಾ ವೈರಸ್​​ಗೆ ತುತ್ತಾದರಾಗಿದ್ದಾರೆ. ಇತ್ತೀಚೆಗೆ ಮಹರಾಷ್ಟ್ರದಿಂದ ಆಗಮಿಸಿದ ಇವರನ್ನು ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿತ್ತು.

ಕೊರೊನಾ ಸೋಂಕು ತಗುಲಿದ ಇವರನ್ನೆಲ್ಲಾ ಚಿಕಿತ್ಸೆಗಾಗಿ ಜಿಲ್ಲೆಯ ನೂತನ ಜಿಲ್ಲಾಸ್ಪತ್ರೆಯ ಕೋವಿಡ್-19 ವಾರ್ಡ್​ಗೆ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.