ಯಾದಗಿರಿ: ನೆರೆ ಪೀಡಿತ ಪ್ರದೇಶ ವೀಕ್ಷಣೆಗಾಗಿ ಯಾದಗಿರಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಯಾದಗಿರಿ ಭೇಟಿ ವೇಳೆ ಟೆಂಪಲ್ ರನ್ ನಡೆಸುತ್ತಿದ್ದಾರೆ.
ಸುರಪುರ ತಾಲೂಕಿನ ದೇವಾಪುರ ಗ್ರಾಮದಲ್ಲಿರುವ ಜಡಿ ಶಾಂತಲಿಂಗೇಶ್ವರ ಮಠಕ್ಕೆ ಸಿಎಂ ಭೇಟಿ ನೀಡಿದರು. ಮಠದಲ್ಲಿ ಗದ್ದುಗೆಗೆ ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸಿ, ಪೀಠಾಧಿಪತಿ ಶಿವಕುಮಾರ್ ಶ್ರೀಗಳ ಆಶೀರ್ವಾದ ಪಡೆದರು. ಇದೆ ವೇಳೆ ಸಿಎಂಗೆ ಶಿವಕುಮಾರ ಶ್ರೀಗಳು ಶಾಲು ಹೊದಿಸಿ ಸನ್ಮಾನಿಸಿದರು.
ಸಚಿವ ಪ್ರಭು ಚವ್ಹಾಣ, ಶಾಸಕ ವೆಂಕಟರೆಡ್ಡಿ ಮುದ್ನಾಳ, ರಾಜುಗೌಡ ಮುಖ್ಯಮಂತ್ರಿಗಳಿಗೆ ಸಾಥ್ ಕೊಟ್ಟರು.
ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಗೆ ಆಗಮಿಸಿ ಸಂತ್ರಸ್ತರ ಸಮಸ್ಯೆ ಆಲಿಸಬೇಕಾದ ಸಿಎಂ ದೇವಸ್ಥಾನಗಳಿಗೆ ಓಡಾಡುತ್ತಿರುವುದಕ್ಕೆ ಸ್ಥಳೀಯರು ಅಸಮಾಧಾನಾ ವ್ಯಕ್ತಪಡಿಸಿದ್ದಾರೆ.