ಯಾದಗಿರಿ : ಇಡೀ ದೇಶವೇ ಲಾಕ್ಡೌನ್ನಿಂದ ಸ್ತಬ್ಧವಾಗಿದೆ. ಈ ಸಂದರ್ಭದಲ್ಲಿ ಮಗು ಕಳೆದುಕೊಂಡ ಪೋಷಕರು ಶವ ಸಂಸ್ಕಾರ ಮಾಡಲು ಪರದಾಡುತ್ತಿದ್ದರು. ಈ ವೇಳೆ ಪೌರ ಕಾರ್ಮಿಕರು ನೆರವಿಗೆ ಧಾವಿಸಿ ಮಗುವಿನ ಅಂತ್ಯಕ್ರಿಯೆ ನೆರೆವೇರಿಸಿ ಮಾನವೀಯತೆ ತೋರಿಸಿದರು.
ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಕಲ್ಯಾಣ ಸಿಂಗ್ ಎಂಬುವವರ 25 ದಿನದ ಹಸುಗೂಸು ಅನಾರೋಗ್ಯದಿಂದ ಮೃತಪಟ್ಟಿದೆ. ಮಗುವಿನ ಶವ ಸಂಸ್ಕಾರ ಮಾಡವುದಕ್ಕೂ ಆಗದೆ ಪೋಷಕರು ಸಂಕಷ್ಟದಲ್ಲಿದ್ದರು. ಈ ವಿಚಾರ ತಿಳಿದ ಸ್ಥಳೀಯ ಎಸ್ಡಿಪಿಐ ನಾಯಕರು ಹಾಗೂ ನಗರಸಭೆ ಪೌರ ಕಾರ್ಮಿಕರು ಕಲ್ಯಾಣಸಿಂಗ್ ನೆರವಿಗೆ ಧಾವಿಸಿ ಅಂತಿಮ ಕಾರ್ಯ ಮುಗಿಸಲು ನೆರವಾದರು.