ಸುರಪುರ: ಬಸ್ ಡಿಪೋದಲ್ಲಿನ ಐದು ಜನ ಚಾಲಕ-ನಿರ್ವಾಹಕರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಬಸ್ ಡಿಪೋ ಸೀಲ್ ಡೌನ್ ಮಾಡಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಲೋಕಜನಶಕ್ತಿ ಪಕ್ಷದ ಜಿಲ್ಲಾ ಅಧ್ಯಕ್ಷ ಅಪ್ಪಾರಾವ್ ನಾಯಕ್, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ. ಬಸ್ ಡಿಪೋದಲ್ಲಿ ಐದು ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಬಸ್ ಡಿಪೋ ಬಳಿಯಲ್ಲಿ ಶಾಲಾ-ಕಾಲೇಜುಗಳಿವೆ. ಅಲ್ಲದೆ ಡಿಪೋ ಬಳಿಯಲ್ಲಿ ಹೋಟೆಲ್‌ಗಳಿದ್ದು, ನೂರಾರು ಜನರು ಇಲ್ಲಿಗೆ ಊಟ-ತಿಂಡಿಗೆ ಬರುತ್ತಾರೆ.
ಬಸ್ ಚಾಲಕ-ನಿರ್ವಾಹಕರು ಸಹ ಇದೇ ಹೋಟೆಲ್‌ಗಳಲ್ಲಿ ಊಟ-ತಿಂಡಿ ಸೇವಿಸಿರುವುದರಿಂದ ಎಷ್ಟು ಜನರಿಗೆ ಸೋಂಕು ತಗುಲುವುದು ಎಂಬುದು ಹೇಳಲಾಗದು. ಹಾಗಾಗಿ ಕೂಡಲೇ ಸುರಪುರ ಬಸ್ ಡಿಪೋ ಸೀಲ್ ಡೌನ್ ಮಾಡಿ ಜನರಿಗೆ ಸೋಂಕು ಹರಡುವುದನ್ನು ತಡೆಯಬೇಕು. ಒಂದು ವೇಳೆ ಸೀಲ್ ಡೌನ್ ಮಾಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಸೂಫಿಯಾ ಸುಲ್ತಾನ್ ಮೂಲಕ ಸಲ್ಲಿಸಿದರು.