ETV Bharat / state

ಸುರಪುರ: ಬಕ್ರೀದ್ ಹಿನ್ನೆಲೆ ನಡೆಯಬಹುದಾದ ಅಕ್ರಮ ಗೋ ಸಾಗಾಟ ತಡೆಯುವಂತೆ ಮನವಿ

ಮುಂಬರುವ ಬಕ್ರೀದ್ ಹಬ್ಬದ ಅಂಗವಾಗಿ ತಾಲೂಕಿನಲ್ಲಿ ನಡೆಯಬಹುದಾದ ಅಕ್ರಮ ಗೋ ಸಾಗಾಟ ಮತ್ತು ಗೋಹತ್ಯೆ ತಡೆಯುವಂತೆ ರಾಮ್ ಸೇನಾ ತಾಲೂಕು ಘಟಕ ಆಗ್ರಹಿಸಿದೆ.

Appeal as stop the illegal cattle transportation

author img

By

Published : Jul 30, 2020, 9:14 PM IST

ಸುರಪುರ: ಬಕ್ರೀದ್ ಹಬ್ಬದ ಅಂಗವಾಗಿ ತಾಲೂಕಿನಲ್ಲಿ ನಡೆಯಬಹುದಾದ ಅಕ್ರಮ ಗೋ ಸಾಗಾಟ ಮತ್ತು ಅಕ್ರಮ ಗೋಹತ್ಯೆಯನ್ನು ತಡೆಯುವಂತೆ ರಾಮ್ ಸೇನಾ ತಾಲೂಕು ಘಟಕದಿಂದ ತಹಶೀಲ್ದಾರ್ ಮತ್ತು ಆರಕ್ಷಕ ನಿರೀಕ್ಷಕರಿಗೆ ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಿದೆ.

ಈ ಕುರಿತು ತಹಶೀಲ್ದಾರ್ ಮತ್ತು ಆರಕ್ಷಕ ನಿರೀಕ್ಷಕರಿಗೆ ಮನವಿ ಸಲ್ಲಿಸಿದ ರಾಮ್ ಸೇನಾ ಕಾರ್ಯಕರ್ತರು, ಇಂದು ದೇಶದಲ್ಲಿ ಗೋಹತ್ಯೆ ಹಾಗೂ ಅಕ್ರಮ ಗೋಸಾಗಾಟ ಮಿತಿ ಮೀರಿದೆ. ಈ ದಂಧೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ, ಇದನ್ನು ತಡೆಯಲು ಸುರಪುರ ನಗರದ ಎಲ್ಲ ನಾಲ್ಕು ದಿಕ್ಕುಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್​​ಗಳನ್ನು ನಿರ್ಮಿಸಿ, ಎಲ್ಲ ವಾಹನಗಳ ತಪಾಸಣೆ ಮಾಡಿ ಗೋ ಸಾಗಾಟವನ್ನು ತಡೆಯುವಂತೆ ಆಗ್ರಹಿಸಿದರು.

ತಾಲೂಕು ದಂಡಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಸೋಫಿಯಾ ಸುಲ್ತಾನ್ ಅವರ ಮೂಲಕ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.