ETV Bharat / state

ಯಾದಗಿರಿ ಜೆಸ್ಕಾಂ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಯಾದಗಿರಿಯ ಎಸಿಬಿ ಅಧಿಕಾರಿಗಳು ಜೆಸ್ಕಾಂ ಲೆಕ್ಕಾಧಿಕಾರಿ ರಾಜು ಪತ್ತಾರ ಮನೆ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಕಲೆ ಹಾಕಿದ್ದಾರೆ.

author img

By

Published : Mar 9, 2021, 11:34 AM IST

yadgiri
ಜೆಸ್ಕಾಂ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಯಾದಗಿರಿ: ಭ್ರಷ್ಟಾಧಿಕಾರಿಗಳಿಗೆ ಎಸಿಬಿ ಇಂದು ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದು, ಮಂಡ್ಯ ಮತ್ತು ಮೈಸೂರು ಸೇರಿದಂತೆ ವಿವಿಧೆಡೆ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನು, ಯಾದಗಿರಿಯಲ್ಲೂ ಅಧಿಕಾರಿಗಳು ಜೆಸ್ಕಾಂ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಜೆಸ್ಕಾಂ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಯಾದಗಿರಿ ಜೆಸ್ಕಾಂ ಲೆಕ್ಕಾಧಿಕಾರಿ ರಾಜು ಪತ್ತಾರ ಎಂಬುವವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮ ಸಂಪತ್ತು ಶೋಧಿಸಿಸಲು ಮುಂದಾಗಿದೆ. ಕಳೆದ 20 ವರ್ಷದಿಂದ ಯಾದಗಿರಿ ಕೆಇಬಿ‌ ಕಚೇರಿಯಲ್ಲಿ ‌ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ರಾಜು ಪತ್ತಾರ ಮೇಲೆ, ಆದಾಯಕ್ಕೂ ಮೀರಿ ಹೆಚ್ಚು ಆಸ್ತಿ ಹೊಂದಿದ ದೂರುಗಳು ಕೇಳಿ ಬಂದ ಹಿನ್ನೆಲೆ, ಯಾದಗಿರಿ ನಗರದ ಸಹರಾ ಕಾಲೋನಿಯಲ್ಲಿರುವ ನಿವಾಸಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದೆ. ದಾಳಿಯಲ್ಲಿ ಅಪಾರ ಪ್ರಮಾಣದ ನಗದುಹಣ, ಚಿನ್ನಾಭರಣ ಪತ್ತೆಯಾಗಿದೆಂದು ಹೇಳಲಾಗುತ್ತಿದ್ದು ಅಧಿಕಾರಿಗಳು ದಾಖಲಾತಿಗಳನ್ನ ಪರಿಶೀಲನೆ ನಡೆಸಿದ್ದಾರೆ.

ಎಸಿಬಿ ಎಸ್ಪಿ ಮಹೇಶ ಮೇಗಣ್ಣನವರ್ ಹಾಗೂ ಡಿವೈಎಸ್ಪಿ ಉಮಾಶಂಕರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ದಾಳಿ ವೇಳೆ ಜೆಸ್ಕಾಂ ಅಧಿಕಾರಿ ರಾಜು ಪತ್ತಾರ ಮನೆಯಲ್ಲಿ ಇದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.