ETV Bharat / state

ನಡುಗಡ್ಡೆಯಲ್ಲಿ 230 ಕುರಿಗಳ ಜೊತೆ ಸಿಲುಕಿದ ಕುರಿಗಾಹಿ: ಎನ್​ಡಿಆರ್​ಎಫ್​ನಿಂದ ರಕ್ಷಣಾ ಕಾರ್ಯ ಆರಂಭ - ರಕ್ಷಣಾ ಕಾರ್ಯಾಚರಣೆ

ಕುರಿ ಮೇಯಿಸಲು ತೆರಳಿದ್ದ ಕುರಿಗಾಹಿ ಟೋಪಣ್ಣ ಎಂಬವರು ತಮ್ಮ 230 ಕುರಿಗಳ ಜೊತೆ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದು, ಎನ್​ಡಿಆರ್​ಎಫ್​ನ 16 ಜನರ ತಂಡ ರಕ್ಷಣಾ ಕಾರ್ಯಾಚರಣೆಗೆ ತಯಾರಿ ನಡೆಸಿದ್ದಾರೆ.

ಎನ್​ಡಿಆರ್​ಎಫ್​ನಿಂದ ರಕ್ಷಣಾ ಕಾರ್ಯ ಆರಂಭ
ಎನ್​ಡಿಆರ್​ಎಫ್​ನಿಂದ ರಕ್ಷಣಾ ಕಾರ್ಯ ಆರಂಭ
author img

By

Published : Aug 9, 2020, 12:25 PM IST

ಯಾದಗಿರಿ: ಕೃಷ್ಣಾ ನದಿ ಪ್ರವಾಹದ ತಪ್ಪಲು ನಡುಗಡ್ಡೆಯಲ್ಲಿ 230 ಕುರಿಗಳೊಂದಿಗೆ ಸಿಕ್ಕಿ ಹಾಕಿಕೊಂಡಿರುವ ಕುರಿಗಾಹಿ ರಕ್ಷಣೆಗೆ ಕೇಂದ್ರದ ಎನ್​ಡಿಆರ್ ಎಫ್​ನ 16 ಜನರ ತಂಡ ನದಿ ತೀರಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಗೆ ತಯಾರಿ ನಡೆಸಿದ್ದಾರೆ.

ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಐಬಿ ತಾಂಡದ ಬಳಿ ಇರುವ ನಡುಗಡ್ಡೆಯಲ್ಲಿ ಘಟನೆ ನಡೆದಿದೆ. ಕುರಿಗಾಹಿ ಟೋಪಣ್ಣ ಎಂಬವರು ಕುರಿಮೇಯಿಸಲು ನಡುಗಡ್ಡೆಗೆ ತೆರಳಿದ್ದರು. ಮೊದಲು 165 ಕುರಿಗಳಿವೆ ಎಂದು ಅಂದಾಜಿಸಲಾಗಿತ್ತು. ಆದರೆ ದ್ರೋಣ್ ಕ್ಯಾಮರಾ ಮೂಲಕ ಕುರಿಗಾಹಿ ಸ್ಥಳವನ್ನ ವೀಕ್ಷಣೆ ಮಾಡಿದಾಗ ಟೋಪಣ್ಣ ಬಳಿ ಸುಮಾರು 230 ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿವೆ ಎಂದು ತಿಳಿದು ಬಂದಿದೆ.

ಎನ್​ಡಿಆರ್​ಎಫ್​ನಿಂದ ರಕ್ಷಣಾ ಕಾರ್ಯ ಆರಂಭ

ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಯಾವ ಸ್ಥಳದಿಂದ ಕಾರ್ಯಾಚರಣೆ ನಡೆಸಿದರೆ, ಸೂಕ್ತ ಎಂಬುದರ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಜಲಾಶಯದಿಂದ ಕೃಷ್ಣಾ ನದಿಗೆ ನೀರಿನ ಹರಿವು 2.20 ಲಕ್ಷ ಕ್ಯೂಸೆಕ್​ನಿಂದ 1.79 ಲಕ್ಷ ಕ್ಯೂಸೆಕ್​ಗೆ ಇಳಿಕೆ ಮಾಡಲಾಗಿದ್ದು, ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆ ಬೋಟ್ ಮೂಲಕ ಕುರಿಗಾಹಿ ರಕ್ಷಣೆ ಕಾರ್ಯ ಪ್ರಾರಂಭಿಸಲಾಗಿದೆ.

ಹೈದರಾಬಾದ್​ನಿಂದ ಆಗಮಿಸಿದ 16 ಜನರ ಎನ್​ಡಿಆರ್​ಎಫ್ ತಂಡ ಎರಡು ಏರ್ ಬೋಟ್​ಗಳನ್ನು ಸಿದ್ಧಪಡಿಸಿಕೊಳ್ಳುವ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. ಜೊತೆಗೆ ಅಗ್ನಿ ಶಾಮಕದಳದ ಒಂದು ಬೋಟ್ಅನ್ನು ಕೂಡ ನದಿ ದಡದಲ್ಲಿ ಇರಿಸಲಾಗಿದೆ. ಸ್ಥಳದಲ್ಲಿ ಸುರಪುರ ಶಾಸಕ ರಾಜುಗೌಡ ಹಾಗೂ ತಾಲೂಕಾಡಳಿತ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.