ಯಾದಗಿರಿ: ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾಬು ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಕೌಳುರು ಗ್ರಾಮದ ಶಿವರೆಡ್ಡಿ ಎಂಬುವರು ಮಾಡಿದ ಹನಿ ನೀರಾವರಿಗೆ 1 ಲಕ್ಷ ರೂ. ಸಬ್ಸಿಡಿ ನೀಡುವ ವಿಚಾರವಾಗಿ ಅಧಿಕಾರಿ ಮಲ್ಲಿಕಾರ್ಜುನ ಬಾಬು ಲಂಚದ ಬೇಡಿಕೆ ಇಟ್ಟಿದ್ದರು.
ಇಂದು ಕಚೇರಿಯಲ್ಲಿ ರೈತ ಶಿವರೆಡ್ಡಿ ಬಳಿ ಮಲ್ಲಿಕಾರ್ಜುನ ಬಾಬು 5 ಸಾವಿರ ರೂ. ಲಂಚ ಸ್ವಿಕರಿಸುತ್ತಿದ್ದ ವೇಳೆ ಎಸಿಬಿ ಎಸ್ಪಿ ಮೇಘಣ್ಣವರ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮಲ್ಲಿಕಾರ್ಜುನ ಬಾಬುನ್ನು ವಶಕ್ಕೆ ಪಡೆದಿದ್ದಾರೆ.