ETV Bharat / state

ಕಿಡ್ನಿ ವೈಫಲ್ಯಕ್ಕೆ ತುತ್ತಾದ ಕಂದಮ್ಮ: ನೆರವಿನ ಸಹಾಯ ಹಸ್ತ ಚಾಚಿದ ಕುಟುಂಬ - kidney problem

ಗುರುಮಠಕಲ್​ನ ನರಸಿಂಹ ಮತ್ತು ಪದ್ಮಾ ದಂಪತಿಯ 6 ವರ್ಷದ ಮಗಳು 'ವಿಲ್ಸನ್ ಡಿಸೀಸ್ ' ಎನ್ನುವ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಕುಟುಂಬಸ್ಥರು ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದು, ತಮ್ಮ ಮಗಳ ಚಿಕಿತ್ಸೆಗೆ ನೆರವಾಗುವಂತೆ ಸಹಾಯಕ್ಕೆ ಮೊರೆಯಿಟ್ಟಿದ್ದಾರೆ.

kidney problem
ಕಿಡ್ನಿ ವೈಫಲ್ಯಕ್ಕೆ ತುತ್ತಾದ ಕಂದಮ್ಮ
author img

By

Published : Mar 2, 2021, 5:43 PM IST

ಯಾದಗಿರಿ: ಕಳೆದ ವರ್ಷವಷ್ಟೇ ಮಗನನ್ನು ಕಳೆದುಕೊಂಡ ಬಡ ಕುಟುಂಬದಲ್ಲಿ ಇದೀಗ ಮಗಳು ಕೂಡ ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.

ಕೆಲ ವರ್ಷಗಳಿಂದ ಗುರುಮಠಕಲ್​ನ ಸಿಹಿ ನೀರಿನ ಬಾವಿ ಹತ್ತಿರ ಉಪಹಾರ, ಫಾಸ್ಟ್ ಫುಡ್ ಹೋಟೆಲ್ ನಡೆಸುತ್ತ ಜೀವನ ಸಾಗಿಸುತ್ತಿರುವ ನರಸಿಂಹ ಮತ್ತು ಪದ್ಮಾ ದಂಪತಿಯ 6 ವರ್ಷದ ಮಗಳಿಗೆ ಲೀವರ್ ಕಸಿ ಮಾಡಬೇಕಿದ್ದು, ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 25 ಲಕ್ಷ ರೂಪಾಯಿ ಖರ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ಮಗುವಿನ ಚಿಕಿತ್ಸೆಗೆ ನೆರವಿನ ಸಹಾಯಕ್ಕೆ ಮೊರೆಯಿಟ್ಟ ಕುಟುಂಬ

ಈ ದಂಪತಿಯ ಮೂವರು ಮಕ್ಕಳಲ್ಲಿ ಕಳೆದ ವರ್ಷವಷ್ಟೇ 3 ವರ್ಷದ ಮಗನೊಬ್ಬ ಹೃದಯದಲ್ಲಿ ರಂಧ್ರದ ಸಮಸ್ಯೆಯಿಂದ ಜೀವ ಕಳೆದುಕೊಂಡಿದ್ದಾನೆ. ಈ ಘಟನೆ ಮರೆಯುವ ಮುನ್ನವೇ ಮತ್ತೊಂದು ಆಘಾತ ಎದುರಾಗಿದೆ. ಸದ್ಯ ಬೆಂಗಳೂರಿನ ಇಂದಿರಾಗಾಂಧಿ ಇನ್ಸ್ಟಿಟ್ಯೂಟ್ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬಾಲಕಿ 'ವಿಲ್ಸನ್ ಡಿಸೀಸ್ ' ಎನ್ನುವ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಹೊಟ್ಟೆಯಲ್ಲಿ ನೀರು ತುಂಬುತ್ತಿರುವುದರಿಂದ ಲೀವರ್ ಬದಲಾವಣೆ ಅನಿವಾರ್ಯ ಎಂದು ವೈದ್ಯರು ಹೇಳಿದ್ದಾರೆ.

ಆರ್ಥಿಕ ಸಹಾಯಕ್ಕೆ ಮನವಿ: ಬಾಲಕಿ ಕುಟುಂಬ ತೀರಾ ಬಡತನದಲ್ಲಿದ್ದು ಸಹೃದಯಿಗಳಿಂದ ಸಹಾಯಹಸ್ತಕ್ಕೆ ಮನವಿ ಮಾಡಿದ್ದಾರೆ.

ಗೂಗಲ್ ಪೇ - 7829327746
ಫೋನ್ ಪೇ -9573330537 ಸಂಖ್ಯೆಗೆ ನೆರವು ನೀಡಲು ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.