ಯಾದಗಿರಿ: ಜಿಲ್ಲೆಯಲ್ಲಿ ಇಂದು ಎರಡು ವರ್ಷದ ಗಂಡು ಮಗು ಸೇರಿದಂತೆ, ಒಟ್ಟು 13 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 929 ಪ್ರಕರಣಗಳ ಪೈಕಿ, 785 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ಒಬ್ಬರು ಮೃತಪಟ್ಟಿರುತ್ತಾರೆ.
ಸುರಪುರ ತಾಲೂಕಿನ ಕೆಂಭಾವಿಯ 24 ವರ್ಷದ ಪುರುಷ (ಪಿ-11263), ಕೆಂಭಾವಿಯ 24 ವರ್ಷದ ಪುರುಷ (ಪಿ-11264), ಹುಣಸಗಿ ಬೈಲಗಿಡ್ಡ ತಾಂಡಾದ 32 ವರ್ಷದ ಪುರುಷ (ಪಿ-11265), ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದ 20 ವರ್ಷದ ಮಹಿಳೆ (ಪಿ-11266), ಯಲಸತ್ತಿ ಗ್ರಾಮದ 27 ವರ್ಷದ ಪುರುಷ (ಪಿ-11267), ಯಲಸತ್ತಿ ಗ್ರಾಮದ 70 ವರ್ಷದ ಮಹಿಳೆ (ಪಿ-11268) ಇವರಿಗೆ ಸೋಂಕು ತಗುಲಿದೆ.
ಯಾದಗಿರಿ ತಾಲೂಕಿನ ಅಲ್ಲಿಪೂರ ದೊಡ್ಡ ತಂಡಾದ 5 ವರ್ಷದ ಹೆಣ್ಣ ಮಗು (ಪಿ-11269), ಹತ್ತಿಕುಣಿ ಗ್ರಾಮದ 27 ವರ್ಷದ ಮಹಿಳೆ (ಪಿ-11270), ಹತ್ತಿಕುಣಿ ಗ್ರಾಮದ 5 ವರ್ಷದ ಗಂಡು ಮಗು (ಪಿ-11271), ಹತ್ತಿಕುಣಿ ಗ್ರಾಮದ 2 ವರ್ಷದ ಗಂಡು ಮಗು (ಪಿ-11272). ಅಲ್ಲಿಪೂರ ದೊಡ್ಡ ತಂಡಾದ 34 ವರ್ಷದ ಪುರುಷ (ಪಿ-11273), ಯಾದಗಿರಿ ಬಸವೇಶ್ವರ ನಗರದ 25 ವರ್ಷದ ಪುರುಷ (ಪಿ-11274), ಗುರುಮಠಕಲ್ ನ 11 ವರ್ಷದ ಬಾಲಕ (ಪಿ-11275) ಇಂದು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಪ್ರಕರಣ ಸಂಖ್ಯೆ ಪಿ-11265ರ ವ್ಯಕ್ತಿ, ಪಿ-8228ರ ವ್ಯಕ್ತಿಯ ಸಂಪರ್ಕದ ಹಿನ್ನೆಲೆ ಹೊಂದಿರುತ್ತಾರೆ. ಉಳಿದ ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಪುಣೆ, ಮುಂಬೈ ಹಾಗೂ ಗುಜರಾತ್ ರಾಜ್ಯದಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ. ಸೋಂಕು ಪತ್ತೆಯಾದವರನ್ನೆಲ್ಲ ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿದೆ.