ಯಾದಗಿರಿ: ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪ್‌ನ ಮನೆಯೊಂದರಲ್ಲಿ ಫೆ. 25 ರಂದು ನಡೆದ ಸೀಮಂತ ಕಾರ್ಯಕ್ರಮದ ವೇಳೆ ಅಡುಗೆ ಅನಿಲ ಸ್ಫೋಟಗೊಂಡು, 24 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಸಂಜೆ ಗಾಯಾಳುಗಳಲ್ಲಿ ಮತ್ತೆ ಐವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 10ಕ್ಕೇರಿದೆ.
ಒಂದೂವರೆ ವರ್ಷದ ಮಗು ಮಹಾಂತೇಶ, ಆದ್ಯಾ (3), ವಯೋವೃದ್ಧೆ ನಿಂಗಮ್ಮ (85), ಗಂಗಮ್ಮ (50), ಶ್ವೇತಾ (6), ಮಂಗಳವಾರ ರಾತ್ರಿಯಿಂದ ಬುಧವಾರದವರೆಗೆ (ಮಾ.2) ವೀರಬಸಪ್ಪ (28), ಭೀಮರಾಯ (78), ಕಲ್ಲಪ್ಪ ಲಕಶೆಟ್ಟಿ (50) ಚೆನ್ನವೀರ ಮ್ಯಾಳಗಿ (30) ಹಾಗೂ ಚೆನ್ನಪ್ಪ (50) ಮೃತಪಟ್ಟಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವ 14 ಜನರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿ ಎನ್ನಲಾಗಿದೆ. ಈ ದುರ್ಘಟನೆಯಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗ್ಯಾಸ್ ಏಜೆನ್ಸಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಡಾ.ವೇದಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: ಯುಪಿಯಲ್ಲಿ ನಾಳೆ 6ನೇ ಹಂತದ ವೋಟಿಂಗ್: ಸಿಎಂ ಯೋಗಿ ಸೇರಿ ಪ್ರಮುಖರ ಭವಿಷ್ಯ ನಿರ್ಧಾರ