ವಿಜಯಪುರ: ಪ್ರತಿ ವರ್ಷದಂತೆ ಶಿವಾಜಿ ವೃತ್ತದಲ್ಲಿ 9 ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆ ಮಾಡಿ ಗಣೇಶ ಚತುರ್ಥಿ ಆಚರಿಸುತ್ತೇವೆ. ಈ ಬಾರಿ ಪ್ರವಾಹ ಬಂದು ಹೋಗಿರುವುದರಿಂದ ಅದ್ಧೂರಿಯಾಗಿ ಆಚರಿಸದೆ ಸರಳವಾಗಿ ಆಚರಿಸಿ, ಉಳಿದ ಹಣವನ್ನು ನೆರೆ ಪರಿಹಾರಕ್ಕೆ ನೀಡಲಾಗುವುದು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ಪಿಓಪಿ ಗಣಪತಿಯನ್ನು ಬಳಸದೇ ಹೊಸ ಮೂರ್ತಿ ಒಂದನ್ನು ಮಾಡಿಸುತ್ತಿದ್ದೇವೆ. ಆ ಗಣಪತಿಯ ಮೂರ್ತಿಯನ್ನೇ ಬಳಸುತ್ತೇವೆ. ಇನ್ನು ಮುಂದೆ ಪ್ರತಿ ವರ್ಷ ಅದೇ ಗಣಪತಿಯ ಮೂರ್ತಿಯನ್ನು ಬಳಸಲಾಗುವದು ಎಂದರು.
ಗಣೇಶನ ವೀಕ್ಷಣೆಗೆ ಬರುವ ಜನರಿಗೆ ಪ್ರತಿದಿನ ಸಸಿಗಳನ್ನು ವಿತರಿಸಲಾಗುವುದು. ಇದಕ್ಕೆ ವೃಕ್ಷೋತ್ಥಾನ ಅಭಿಯಾನ ಕೂಡಾ ನಮ್ಮ ಕೈ ಜೋಡಿಸಿದೆ. ಹಲವು ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವುದರ ಜೊತೆಗೆ ಸಾವಯವ ಕೃಷಿ ಸಾಧಕರನ್ನು ಕೂಡಾ ಗುರುತಿಸಿ ಗೌರವಿಸಲಾಗುವುದು ಎಂದು ಹೇಳಿದರು.