ETV Bharat / state

ಭೀಮಾ ನದಿಗೆ ಹರಿದು ಬಂದು ಉಜನಿ ಜಲಾಶಯದ ನೀರು: ರೈತರ ಮೊಗದಲ್ಲಿ ಮಂದಹಾಸ - ಭೀಮಾ ನದಿಗೆ ನೀರು ಬಿಡುಗಡೆ

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿ ಬಿಡಲಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Water Released From Ujani Dam To Bhima River
ಭೀಮಾ ನದಿಗೆ ಹರಿದು ಬಂದು ಉಜನಿ ಜಲಾಶಯ ನೀರು
author img

By

Published : Mar 15, 2022, 10:16 AM IST

ವಿಜಯಪುರ: ಬೇಸಿಗೆ ಆರಂಭವಾಗುವ ಮುನ್ನವೇ ಮಹಾರಾಷ್ಟ್ರ ಗಡಿ ಹಂಚಿಕೊಂಡಿರುವ ಹಲವು ಗ್ರಾಮಗಳ ರೈತರ ಜೀವನಾಡಿ ಭೀಮಾ ನದಿ ಬತ್ತಿ‌ ಹೋಗಿತ್ತು. ಇದರಿಂದ ರೈತರು ಬೆಳೆಗಳಿಗೆ, ಕುಡಿಯಲು ನೀರಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆ, ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿ ಬಿಡಲಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಭೀಮಾ ನದಿಗೆ ಹರಿದು ಬಂದು ಉಜನಿ ಜಲಾಶಯದ ನೀರು: ರೈತರ ಮೊಗದಲ್ಲಿ ಮಂದಹಾಸ

ಜಿಲ್ಲಾಡಳಿತ ಹಾಗೂ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರ ನಿರಂತರ ಪ್ರಯತ್ನದಿಂದ ಉಜನಿ ಜಲಾಶಯದಿಂದ ಭೀಮಾ ನದಿಗೆ ಮಹಾರಾಷ್ಟ್ರ ಸರ್ಕಾರ ನೀರು ಬಿಡುಗಡೆ ಮಾಡಿದೆ. ಈ ನೀರು ಈಗ ರಾಜ್ಯದ ದಸೂರ, ಗೋವಿಂದಪುರ ದಾಟಿ ಉಮರಾಣಿ ತಲುಪಿದ್ದು, ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ‌ ಉಮರಾಣಿಯ ರೈತರಾದ ಲಕ್ಷ್ಮಣ ಚಿಂಚೋಳಿ, ಸುಭಾಷ ಭೈರಗೊಂಡ ಮತ್ತು ಅನೀಲ ಕೋಳಿ ಎಂಬುವವರು ಸಂತಸ ಹಂಚಿಕೊಂಡಿದ್ದಾರೆ.‌

ಬಿಡುಗಡೆ ಮಾಡಲಾದ ನೀರು ಉಮರಾಣಿ ಬ್ಯಾರೇಜ್ ತುಂಬಿ ಮುಂದಕ್ಕೆ ಹರಿಯುತ್ತಿದೆ. ಭೀಮಾ ನದಿಯಲ್ಲಿ ಸದಾ ನೈಸರ್ಗಿಕ ಹರಿವು ಕಾಪಾಡಬೇಕು. ಪ್ರಾಣಿ, ಪಕ್ಷಿಗಳಿಗೆ ಬದುಕಲು ನೀರು ಅನಿವಾರ್ಯವಾಗಿದೆ ಎಂದು ಆಗ್ರಹಿಸಿ 2000 ರಲ್ಲಿಯೇ ಭೀಮಾ ಹೋರಾಟಗಾರ ಪಂಚಪ್ಪ ಕಲಬುರ್ಗಿ ಸುಪ್ರೀಂ ಕೋರ್ಟ್​ನಲ್ಲಿ ಕೇಸ್ ಹಾಕಿದ್ದರು.

ಅಲ್ಲದೇ, ಅಂದಿನ ದಿನಗಳಲ್ಲಿ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಈ ನಿಟ್ಟಿನಲ್ಲಿ ನ್ಯಾಯಾಲಯದ ಮೂಲಕ ನಿರ್ದೇಶನ ಹೊರಡಿಸುವಲ್ಲಿ ಯಶಸ್ವಿಯಾಗಿದ್ದರು. ಈಗಲೂ ಕೂಡ ಭೀಮಾ ನದಿಯಲ್ಲಿ ಬೇಸಿಗೆಯಲ್ಲಿಯೇ ನೀರಿನ ನೈಸರ್ಗಿಕ ಹರಿವು ಕಾಪಾಡುವಂತೆ ಕರ್ನಾಟಕ ಸರ್ಕಾರ ಕ್ರಮ ಕೈಗೊಂಡರೆ ಭೀಮಾ ತೀರದ ಮಣ್ಣಿನ‌ ಮಕ್ಕಳಿಗೆ ಬೇಸಿಗೆ ಕಾಲದಲ್ಲಿ ಎದುರಾಗುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಲಿದೆ.

ಇದನ್ನೂ ಓದಿ: ಈ ಬಾರಿ ಮಳೆ, ಬೆಳೆ ಹುಲುಸಾಗಿ ಆಗಲಿದೆ: ಬಾಗಲಕೋಟೆ ಮಳೆ ರಾಜೇಂದ್ರಸ್ವಾಮಿ ಭವಿಷ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.