ETV Bharat / state

ಕೊರೊನಾ ಮಾರ್ಗಸೂಚಿ ಮರೆತ ಜಿಲ್ಲಾಸ್ಪತ್ರೆ: ರೋಗ ವ್ಯಾಪಕವಾಗುವ ಭೀತಿಯಲ್ಲಿ ಜನ

author img

By

Published : Dec 7, 2020, 4:36 PM IST

ವಿಜಯಪುರ ಜಿಲ್ಲೆಯಲ್ಲಿ ಹೊರ ರೋಗಿಗಳ ಘಟಕ ಆರಂಭಿಸಲಾಗಿದ್ದರೂ ಯಾರೊಬ್ಬರೂ ಕೋವಿಡ್​ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಅಲ್ಲದೆ ಆಸ್ಪತ್ರೆಯ ಆಡಳಿತ ಮಂಡಳಿ ಕೂಡ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

Vijayapur district hospital
ವಿಜಯಪುರ ಜಿಲ್ಲಾಸ್ಪತ್ರೆ

ವಿಜಯಪುರ: ಕೊವಿಡ್ ಆಸ್ಪತ್ರೆಯಾಗಿ ಪರಿವರ್ತನೆಗೊಂಡಿದ್ದ ಜಿಲ್ಲಾಸ್ಪತ್ರೆ ಅನ್​ಲಾಕ್ ನಂತರ ಸಾಮಾನ್ಯ ರೋಗಿಗಳ ಸೇವೆಗೆ ಮುಕ್ತವಾಗಿದೆ. ಆದರೆ ಹೊರ ರೋಗಿಗಳಿಗೆ ಕನಿಷ್ಠ ಸ್ಯಾನಿಟೈಸರ್​ ನೀಡುವ​​​ ವ್ಯವಸ್ಥೆ ಕೂಡ ಮಾಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ...ಕೋಲಾರದಲ್ಲಿ ಆಕ್ಷೇಪಾರ್ಹ ಪೋಸ್ಟರ್​: ಸಾಮಾಜಿಕ ಶಾಂತಿ ಕದಡುವ ಕೆಲಸಕ್ಕೆ ಮುಂದಾದ ಕಿಡಿಗೇಡಿಗಳು

ಹೊರ ರೋಗಿಗಳ ಘಟಕ ಆರಂಭಿಸಲಾಗಿದ್ದರೂ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್​​ ಬಳಕೆ ಇಲ್ಲದಂತಾಗಿದೆ. ಇದರಿಂದಾಗಿ ಒಬ್ಬ ಸೋಂಕಿತ ಆಸ್ಪತ್ರೆಗೆ ಕಾಲಿಟ್ಟರೆ ಮತ್ತೆ ರೋಗ ವ್ಯಾಪಕವಾಗಿ ಹರಡುವ ಲಕ್ಷಣ ಕಂಡು ಬರುತ್ತಿದೆ. ಜಿಲ್ಲಾಸ್ಪತ್ರೆ ಪಕ್ಕದ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಕೂಡ ಯಾವುದೇ ಕೋವಿಡ್​ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎನ್ನಲಾಗುತ್ತಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಂದ್ರ ಕಾಪ್ಸೆ

ಪ್ರಸ್ತುತ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಜಿಲ್ಲೆಯು ಸಹಜ ಸ್ಥಿತಿಗೆ ಮರಳಿದೆ. ಜನರು ಕೂಡ ಕೊರೊನಾ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದು, ಅದಕ್ಕೆ ತಕ್ಕಂತೆಯೇ ಜಿಲ್ಲಾಡಳಿತ ಕೂಡ ನಡೆದುಕೊಳ್ಳುತ್ತಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ವಿಚಾರಿಸಿದರೆ, ನಿತ್ಯ ಆಸ್ಪತ್ರೆಯಲ್ಲಿ 200-250 ಕೊರೊನಾ ಟೆಸ್ಕ್ ಮಾಡಲಾಗುತ್ತಿದೆ. ಎಲ್ಲಾ ತಾಲೂಕು ಕೇಂದ್ರಗಳಿಗೆ ನೀಡಿರುವ ಗುರಿಗಿಂತ ಹೆಚ್ಚು ಟೆಸ್ಟ್ ಮಾಡಲಾಗುತ್ತಿದೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಪ್ರತಿಭಟನೆ: ಕನ್ನಡಪರ ಸಂಘಟನೆಗಳಿಗೆ ಮಂಗಳಮುಖಿಯರ ಸಾಥ್​​

ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಬದಲಿಗೆ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ. 10 ಖಾಸಗಿ ಆಸ್ಪತ್ರೆಗಳನ್ನು ಕೊರೊನಾ ಆಸ್ಪತ್ರೆಗಳಾಗಿ ಪರಿರ್ವತಿಸಲಾಗಿತ್ತು. ಈಗ ಯಾವುದನ್ನೂ ಮೀಸಲಿಟ್ಟಿಲ್ಲ. ಜಿಲ್ಲಾಸ್ಪತ್ರೆಯ ಕೆಲವು ಕೋಣೆಗಳು ಮಾತ್ರ ಕೋವಿಡ್​ಗಾಗಿ ಮೀಸಲಿಡಲಾಗಿದೆ. ಎರಡನೇ ಅಲೆ ಶುರುವಾಗುವ ಮುನ್ಸೂಚನೆಗಳು ಬರುತ್ತಿರುವ ಕಾರಣ ಜಿಲ್ಲಾಸ್ಪತ್ರೆ ಮುಂಜಾಗ್ರತೆ ಕೈಗೊಳ್ಳಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.