ETV Bharat / state

ಹಿರೇಮುರಾಳ ಗ್ರಾಮವನ್ನು ಹೋಬಳಿಯನ್ನಾಗಿ ಘೋಷಿಸುವಂತೆ ಶಾಸಕರಿಗೆ ಮನವಿ - ಸೋಮನಾಳ ಆರೋಗ್ಯ ಕೇಂದ್ರ

ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರನ್ನು ಗ್ರಾಮಸ್ಥರು ಭೇಟಿ ಮಾಡಿ ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಮನವಿ ಸಲ್ಲಿಸಿದರು.

ಶಾಸಕರಿಗೆ ಮನವಿ
ಶಾಸಕರಿಗೆ ಮನವಿ
author img

By

Published : Sep 19, 2020, 4:01 PM IST

ಮುದ್ದೇಬಿಹಾಳ : ತಾಲೂಕಿನ ಹಿರೇಮುರಾಳ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಗ್ರಾಮಸ್ಥರು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲೂಕಿನ ಹಿರೇಮುರಾಳ ಗ್ರಾಮಕ್ಕೆ ಆಗಮಿಸಿದ್ದ ಶಾಸಕರನ್ನು ಭೇಟಿ ಮಾಡಿದ ಗ್ರಾಮಸ್ಥರು, ಹಿರೇಮುರಾಳದಿಂದ ನಾಲತವಾಡ, ಮುದ್ದೇಬಿಹಾಳ, ಅಡವಿ, ಸೋಮನಾಳ ಆರೋಗ್ಯ ಕೇಂದ್ರಗಳು ದೂರವಾಗುತ್ತಿದ್ದು, ಇಲ್ಲಿಯೇ ಒಂದು ಆರೋಗ್ಯ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಗ್ರಾಮಸ್ಥರಾದ ರುದ್ರು ರಾಮೋಡಗಿ, ಸುರೇಶ್ ಅಗ್ನಿ,ಅಯ್ಯಪ್ಪ ತಂಗಡಗಿ, ಸಂಗಯ್ಯ ಹಿರೇಮಠ, ನಿಂಗಪ್ಪ ಜಾಲವಾದಗಿ, ಬಸವರಾಜ ಸರೂರ, ಸುರೇಶ ಭೋವಿ, ಚಂದ್ರಶೇಖರ ನಾರಾಯಣಪುರ, ರಾಜುಬಾಕ್ಷ ಬಾಗೇವಾಡಿ, ಚಂದ್ರು ರಾಮೋಡಗಿ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.