ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಕಪನೂರು ಗ್ರಾಮದ ವಿಜೇಂದ್ರ ಹಿರೇಮಠ ಎಂಬ ಯುವಕನ ಅಲ್ಬಂ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದೆ.
- " class="align-text-top noRightClick twitterSection" data="">
ಸಣ್ಣ ವಯಸ್ಸಿನಿಂದಲೇ ವಿಜೇಂದ್ರ ನಟನೆ ಹಾಗೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದು, ಹಲವು ಬಾರಿ ಈತನ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಗಲಿಲ್ಲವಂತೆ. ಆದರೂ ಧೃತಿಗೆಡದೆ ಸ್ವತಃ ರೋಮಾಂಚನ ನೀನು ಎಂಬ ಹೆಸರಿನ ಆಲ್ಬಂ ಸಾಂಗ್ ಮಾಡಿದ್ದು, ಸಖತ್ ಹಿಟ್ ಆಗಿದೆ.
ಸದ್ಯ ರೋಮಾಂಚನ ನೀನು ಆಲ್ಬಂ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆತನ ಪ್ರಯತ್ನವನ್ನು ಮೆಚ್ಚಿದವರು ಆತನಿಗೆ ಶುಭ ಕೋರುತ್ತಿದ್ದಾರೆ. ಸ್ವತಃ ಆಲ್ಬಂ ಸಾಂಗ್ ಬರೆದು ನಟನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಆತನ ಕಲೆಯನ್ನ ಮೆಚ್ಚಿದ ಲಹರಿ ಆಡಿಯೋ ಸಂಸ್ಥೆಯವರು, ರೋಮಾಂಚನ ನೀನು ಸಾಂಗ್ ಹಕ್ಕನ್ನ ಪಡೆದುಕೊಂಡಿದ್ದಾರೆ. ಈ ಆಲ್ಬಂ ಸಾಂಗ್‌ನ್ನ ಮೈಸೂರು, ಬೆಂಗಳೂರು, ವಿಜಯಪುರ, ಮಂಗಳೂರಿನಲ್ಲಿ ಶೂಟಿಂಗ್ ಮಾಡಲಾಗಿದೆ.