ವಿಜಯಪುರ: ಸಿಂದಗಿ ಪೊಲೀಸರು ನಡೆಸಿದ ಹಲ್ಲೆ ನನ್ನ ತಂದೆ ಸಾವಿಗೆ ಕಾರಣವಾಗಿದೆ ಎಂದು ಕಾನ್ಸ್‌ಟೇಬಲ್ ಬಸವರಾಜ ಪಾಟೀಲ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಅನುಪಮ್ ಅಗರವಾಲ್ ಸ್ಪಷ್ಟನೆ ನೀಡಿದ್ದಾರೆ.
ಪೊಲೀಸರಿಂದ ಬಸವರಾಜ್ ಪಾಟೀಲ ಕುಟುಂಬಕ್ಕೆ ಯಾವುದೇ ತೊಂದರೆಯಾಗಿಲ್ಲ: ಎಸ್ಪಿ ಸ್ಪಷ್ಟನೆ - ಕಾನ್ಸ್‌ಟೇಬಲ್ ಬಸವರಾಜ ಪಾಟೀಲ ಆರೋಪಕ್ಕೆ ವಿಜಯಪುರ ಎಸ್ಪಿ ಸ್ಪಷ್ಟನೆ
ವಿಜಯಪುರದ ಪೊಲೀಸ್ ಕಾನ್ಸ್‌ಟೇಬಲ್ ಬಸವರಾಜ್ ಪಾಟೀಲ ತನ್ನ ತಂದೆ ಸಾವಿಗೆ ಸಿಂದಗಿ ಪೊಲೀಸರ ಕಿರುಕುಳವೇ ಕಾರಣ ಎಂದು ಆರೋಪಿಸಿ ವಿಡಿಯೋ ಹರಿಬಿಟ್ಟಿದ್ದರು. ಈ ಕುರಿತು ಸ್ಪಷ್ಟನೆ ನೀಡಿರುವ ಎಸ್ಪಿ ಅನುಪಮ್ ಅಗರ್ವಾಲ್ ಅವರು, ಬಸವರಾಜ್ ತಂದೆ ಸಾವಿಗೂ ಸಿಂದಗಿ ಪೊಲೀಸರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್ಪಿ ಸ್ಪಷ್ಟನೆ
ವಿಜಯಪುರ: ಸಿಂದಗಿ ಪೊಲೀಸರು ನಡೆಸಿದ ಹಲ್ಲೆ ನನ್ನ ತಂದೆ ಸಾವಿಗೆ ಕಾರಣವಾಗಿದೆ ಎಂದು ಕಾನ್ಸ್‌ಟೇಬಲ್ ಬಸವರಾಜ ಪಾಟೀಲ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಅನುಪಮ್ ಅಗರವಾಲ್ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ 2016 ರಲ್ಲಿ ಕಾನ್ಸ್‌ಟೇಬಲ್ ಬಸವರಾಜ್ ಪಾಟೀಲ ಪೊಲೀಸರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ವಿಡಿಯೋ ಹರಿಬಿಟ್ಟಿದ್ದರು. ಎಲ್ಲವೂ ಸತ್ಯಕ್ಕೆ ದೂರವಾಗಿದ್ದು, ಇದರಲ್ಲಿ ನಮ್ಮ ಪೊಲೀಸರ ಕೈವಾಡವಿಲ್ಲ. ಆತನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಎಸ್ಪಿ ಅನುಪಮ್ ಅಗರವಾಲ್ ವಿವರಿಸಿದರು.