ವಿಜಯಪುರ: ನಾಳೆಯಿಂದ ಲಾಕ್ಡೌನ್ ಜಾರಿಯಾಗುತ್ತಿದ್ದು ಜನರು ಸಾಮಾಜಿಕ ಅಂತರ, ಮಾಸ್ಕ್ ಸರಿಯಾಗಿ ಧರಿಸದೆ ವ್ಯಾಪಾರ, ವಹಿವಾಟು ನಡೆಸುತ್ತಿರುವ ದೃಶ್ಯ ಕಂಡು ಬಂದಿದೆ.
ಜಿಲ್ಲೆಯ ಆಲಮೇಲ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ದೈನಂದಿನ ಬದುಕಿಗೆ ಬೇಕಿರುವ ವಸ್ತುಗಳನ್ನು ಕೊಳ್ಳಲು ಜನರು ಗುಂಪು ಗುಂಪಾಗಿ ಸೇರಿದ್ದರು. ಕ್ರಮ ಜರುಗಿಸಬೇಕಾದ ಸ್ಥಳೀಯ ಆಡಳಿತ ಹಾಗೂ ಪೊಲೀಸರ ನಿರ್ಲಕ್ಷ್ಯ ಇಲ್ಲಿ ಗೋಚರಿಸಿತು.