ETV Bharat / state

ನೂತನ ಪೊಲೀಸ್ ಚೆಕ್ ಪೋಸ್ಟ್ ಉದ್ಘಾಟಿಸಿದ ವಿಜಯಪುರ ಎಸ್ಪಿ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್

ಬೆಂಗಳೂರಿನಿಂದ ಬರುವ ವಾಹನಗಳು ವಿಜಯಪುರ ನಗರ ಪ್ರವೇಶಿಸುವ ಪ್ರಮುಖ ರಸ್ತೆಯಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ.

Vijayapura SP to inaugurate new police check post
ನೂತನ ಪೊಲೀಸ್ ಚೆಕ್ ಪೋಸ್ಟ್ ಉದ್ಘಾಟಿಸಿದ ವಿಜಯಪುರ ಎಸ್ಪಿ
author img

By

Published : Aug 11, 2020, 5:21 PM IST

Updated : Aug 11, 2020, 5:52 PM IST

ಜಯಪುರ: ವಿಜಯಪುರ ನಗರದ ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚೆಕ್ ಪೋಸ್ಟ್​ಅನ್ನು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ಉದ್ಘಾಟನೆ ಮಾಡಿದರು.

ನೂತನ ಪೊಲೀಸ್ ಚೆಕ್ ಪೋಸ್ಟ್ ಉದ್ಘಾಟಿಸಿದ ವಿಜಯಪುರ ಎಸ್ಪಿ

ನಗರದ ಮನಗೂಳಿ ರಸ್ತೆಯ ರಿಂಗ್ ರೋಡ್ ಬಳಿ ಪೊಲೀಸ್ ಚೆಕ್ ಪೋಸ್ಟ್ ಮಾಡಲಾಗಿದ್ದು, ಇದು ನಗರದ ಪ್ರಮುಖ ರಸ್ತೆಯಾಗಿದೆ. ಈ ಮಾರ್ಗದ ಮೂಲಕವೇ ಬೆಂಗಳೂರಿನಿಂದ ಬರುವ ವಾಹನಗಳು ವಿಜಯಪುರ ನಗರಕ್ಕೆ ಎಂಟ್ರಿಯಾಗುತ್ತವೆ. ಈ ಹಿನ್ನೆಲೆಯಲ್ಲಿ ನಾಲ್ಕು ಸಿಸಿ ಕ್ಯಾಮರಾಗಳನ್ನು ಈ ಭಾಗದಲ್ಲಿ ಅಳವಡಿಸಲಾಗಿದೆ. ಜಲನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಹೆಚ್ಚಿನ ಅಪರಾಧಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಈ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.

ಅಪರಾಧ ನಡೆದ ಮೇಲೆ ಬೇರೆ ಕಡೆ ತಪ್ಪಿಸಿಕೊಂಡು ಹೋಗಲು ಈ ದಾರಿಯೇ ಪ್ರಮುಖವಾಗಿರುವ ಕಾರಣ ಅಂಥ ಪ್ರಕರಣ ಭೇದಿಸಲು ಈ ಚೆಕ್ ಪೋಸ್ಟ್ ಸಹಕಾರಿಯಾಗಲಿದೆ. ಆರೋಪಿಗಳನ್ನು ಇನ್ನೂ ಮುಂಬರುವ ದಿನಗಳಲ್ಲಿ ವಿಜಯಪುರ ನಗರದ ಪ್ರಮುಖ ಸ್ಥಳಗಳಲ್ಲಿ ಸಹ ಈ ರೀತಿಯ ಚೆಕ್ ಪೋಸ್ಟ್ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದರು.

Last Updated : Aug 11, 2020, 5:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.