ETV Bharat / state

'ದೇಹವನ್ನು ಅಗ್ನಿಗೆ ಅರ್ಪಿಸಿ, ಸ್ಮಾರಕ ಕಟ್ಟಬೇಡಿ': ಸಿದ್ದೇಶ್ವರ ಶ್ರೀಗಳು ಬರೆದಿದ್ದ ಅಭಿವಂದನ ಪತ್ರ - etv bharat kannada

ನಾಡಿನ ಪ್ರಸಿದ್ಧ ಪ್ರವಚನಕಾರ, ಭಕ್ತರ ಮನದಲ್ಲಿ ನಡೆದಾಡುವ ದೇವರೆಂದೇ ಖ್ಯಾತಿ ಗಳಿಸಿದ್ದ ವಿಜಯಪುರದ ಸಿದ್ದೇಶ್ವರ ಶ್ರೀಗಳು ರಚಿಸಿದ್ದ ಅಂತಿಮ ಅಭಿವಂದನ ಪತ್ರ ಇಲ್ಲಿದೆ.

Siddeshwara Swamiji
ಸಿದ್ದೇಶ್ವರ ಸ್ವಾಮೀಜಿ
author img

By

Published : Jan 3, 2023, 9:09 AM IST

ವಿಜಯಪುರ: ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ವಯೋಸಹಜ ಅನಾರೋಗ್ಯದ ಕಾರಣದಿಂದ ನಿನ್ನೆ ಸಂಜೆ ದೈವಾಧೀನರಾಗಿದ್ದಾರೆ. ಪ್ರಸಿದ್ಧ ಜ್ಞಾನಯೋಗಿಯು ತಮ್ಮ ಅರ್ಥಪೂರ್ಣ, ಸರಳ ಪ್ರವಚನದ ಮೂಲಕ ಭಕ್ತರಿಗೆ ಜ್ಞಾನ ದೀವಿಗೆಯಾಗಿದ್ದರು. ಶ್ರೀಗಳು ಅಭಿವಂದನ ಪತ್ರವನ್ನು ಬರೆದು ಬದುಕಿನ ಸಂದೇಶವನ್ನು ಸಾರಿದ್ದು, ತಮ್ಮ ಅಂತಿಮ ವಿಧಿವಿಧಾನಗಳ ಬಗ್ಗೆಯೂ ತಿಳಿಸಿ ಹೋಗಿದ್ದಾರೆ.

ನುಡಿದಂತೆ ನಡೆದು, ನಡೆದಂತೆ ನುಡಿದ ನಿಜಸಂತ 2014ರ ಗುರುಪೂರ್ಣಿಮೆ ದಿನ ತಮ್ಮ ಅಂತಿಮ ಅಭಿವಂದನ ಪತ್ರ ರಚಿಸಿದ್ದರು. ಈ ಪತ್ರಕ್ಕೆ ನ್ಯಾಯಾಧೀಶರು ಸಹಿ ಹಾಕಿದ್ದಾರೆ. ನಿನ್ನೆ ವೈಕುಂಠ ಏಕಾದಶಿ ದಿನವಾಗಿದ್ದು ಸ್ವರ್ಗದ ಎಲ್ಲ ಬಾಗಿಲುಗಳು ತೆರೆದಿರುತ್ತವೆ ಎಂದು ಹಿಂದೂ ಪೌರಾಣಿಕ ನಂಬಿಕೆ. ಸಿದ್ದೇಶ್ವರ ಶ್ರೀಗಳು ಇಂಥ ವಿಶೇಷ ದಿನದಂದೇ ಇಹಲೋಕ ತ್ಯಜಿಸಿದ್ದಾರೆ. ಇವರು ಅಂತಿಮ ಅಭಿವಂದನ ಪತ್ರದ ಸಾಲುಗಳು ಹೀಗಿವೆ..

Siddeshwara Swamiji
ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಅಂತಿಮ ಅಭಿವಂದನ ಪತ್ರ

ಬದುಕು ಅನುಭವಗಳ ಪ್ರವಾಹ. ಅದರ ಸಿರಿವಂತಿಕೆಯು ವಿಶ್ವ-ಚಿಂತನೆ ಹಾಗೂ ಸತ್ಯ ಸಂಶೋಧನೆಗಳಿಂದ. ಅದರ ಸೌಂದರ್ಯವು ರಾಗದ್ವೇಷರಹಿತವಾದ ಹಾಗೂ ಅಸೀಮಿತವಾದ ಸದ್ಭಾವದಿಂದ. ಅದನ್ನು ಸುಭಗ ಹಾಗೂ ಸಮೃದ್ಧಗೊಳಿಸುವುದೇ 'ಸಾಧನೆ'. ಅಂಥ ಜೀವನದ ಉಪಯುಕ್ತ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ 'ಧರ್ಮ'. ಅದು ಸ್ವ-ಪರ ನೆಮ್ಮದಿಗೆ ಕಾರಣ.

ನನ್ನದು ಆವೇಗವಿಲ್ಲದ ಸಾವಧಾನದ ಸಾಮಾನ್ಯ ಬದುಕು. ಅದನ್ನು ರೂಪಿಸಿದವರು 'ಗುರುದೇವರು'. ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸ-ಹೃದಯರು, ಸಾಧಕರು ಹಾಗೂ ಶ್ರೀ ಸಾಮಾನ್ಯರು. ನಿಸರ್ಗವು ಮೈ ಮನಸ್ಸುಗಳಿಗೆ ತಂಪನಿತ್ತಿದೆ. ತಾತ್ತ್ವಿಕ ಚಿಂತನೆಗಳು ತಿಳಿಬೆಳಗ ಹರಡಿವೆ. ಜಾಗತಿಕ ತತ್ತ್ವಜ್ಞಾನಿಗಳ ಮತ್ತು ವಿಜ್ಞಾನಿಗಳ ಶೋಧನೆಗಳು ದೃಷ್ಟಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ.

ನಾನು ಎಲ್ಲದಕ್ಕೂ 'ಉಪಕೃತ'. ಬದುಕು ಮುಗಿಯುತ್ತದೆ; ದೀಪ ಆರಿದಂತೆ; ತೆರೆ ಅಡಗಿದಂತೆ; ಮೇಘ ಕರಗಿದಂತೆ. ಉಳಿಯುವುದು ಬರಿ ಬಯಲು. ಮಹಾಮೌನ. ಶೂನ್ಯಸತ್ಯ! ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ; ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು; ಅದಕ್ಕಾಗಿ ಈ 'ಅಂತಿಮ ಅಭಿವಾದನ-ಪತ್ರ'!

ಇದನ್ನೂ ಓದಿ: ಶಾಂತಿ ಗೌರವದಿಂದ ಸಿದ್ದೇಶ್ವರ ಶ್ರೀಗಳ ಅಂತಿಮ ಯಾತ್ರೆ ಮಾಡೋಣ: ಭಕ್ತರಿಗೆ ಸಿಎಂ ಮನವಿ

ದೇಹದ ವಿಷಯದಲ್ಲಿ ಒಂದೆರಡು ಆಶಯಗಳು. ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಯರ್ಪಿತ ಮಾಡುವುದು. ಶ್ರಾದ್ಧಿಕ ವಿಧಿ-ವಿಧಾನಕರ್ಮಗಳು ಅನಗತ್ಯ. ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು. ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು.

ಅಂತಿಮ ನೆನಹು; "ಸತ್ಯವೂ ಇಲ್ಲ, ಅಸತ್ಯವೂ ಇಲ್ಲ. ಸಹಜವೂ ಇಲ್ಲ, ಅಸಹಜವೂ ಇಲ್ಲ. ನಾನೂ ಇಲ್ಲ, ನೀನೂ ಇಲ್ಲ. ಇಲ್ಲ, ಇಲ್ಲ ಎಂಬುದು ತಾನಿಲ್ಲ. ಗುಹೇಶ್ವರನೆಂಬುದು ತಾ ಬಯಲು". ಅಂತ್ಯಃ ಪ್ರಣಾಮಾಂಜಲಿಃ! ಎಂದು ಅಭಿವಂದನಾ ಪತ್ರವನ್ನು ಶ್ರೀಗಳು ಬರೆದಿದ್ದು, ಪತ್ರದ ಕೊನೆಯಲ್ಲಿ ನ್ಯಾಯಾಧೀಶರು ಸಹಿ ಹಾಕಿದ್ದಾರೆ.

ಸಂಜೆ ಶ್ರೀಗಳ ಅಂತ್ಯಸಂಸ್ಕಾರ: ಸಿದ್ದೇಶ್ವರ ಶ್ರೀಗಳ ಮೃತದೇಹದ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಇಂದು ಬೆಳಗಿನಿಂದ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಬಳಿಕ ಸೈನಿಕ ಶಾಲೆ ಆವರಣಕ್ಕೆ ತಂದು ಅಲ್ಲಿಯೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಲಾಗುತ್ತದೆ.

ಸಂಜೆ 5 ಗಂಟೆಯ ನಂತರ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಮಠಾಧೀಶರು, ರಾಜ್ಯ ಮತ್ತು ಕೇಂದ್ರ ಸರಕಾರದ ಸಚಿವರು, ಶಾಸಕರು ಹಾಗು ಅಪಾರ ಭಕ್ತ ಸಮೂಹ ಈ ಸಂದರ್ಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಗೌರವದಿಂದ ಭಕ್ತಿ ಭಾವದಿಂದ ಅಂತ್ಯಕ್ರಿಯೆಯಲ್ಲಿ ಭಾಗವಹಿಸೋಣ ಎಂದು ಸಿಎಂ ಬೊಮ್ಮಾಯಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ, ಸಂಜೆ ಅಂತ್ಯಕ್ರಿಯೆ; ವಿಜಯಪುರದ ಶಾಲೆ, ಕಾಲೇಜುಗಳಿಗೆ ರಜೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.