ವಿಜಯಪುರ : ಬೀಗ ಹಾಕಿನ ಮನೆಗಳಲ್ಲಿ ಹಾಗೂ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಯುವಕನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ನವನಗರದ ನಿವಾಸಿ ಗಣೇಶ ಸುಭಾಷ ಪವಾರ(19) ಆರೋಪಿ ಎಂದು ಗುರುತಿಸಲಾಗಿದೆ. ಈತ ಸದ್ಯ ವಿಜಯಪುರದ ಗಾಂಧಿ ಚೌಕ್ದ ಸ್ಟಾರ್ ಚೌಕ್ ಶೆಡ್ನಲ್ಲಿ ವಾಸವಿದ್ದು, ಹಗಲು ಹೊತ್ತು ಕಾರ್ಮಿಕನಾಗಿ ಕೆಲಸ ಮಾಡಿ, ರಾತ್ರಿ ಬೀಗ ಹಾಕಿದ ಮನೆ ಮತ್ತು ಹೊರಗಡೆ ನಿಲ್ಲಿಸಿದ್ದ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಎನ್ನಲಾಗುತ್ತಿದೆ.
ಆರೋಪಿಯಿಂದ 95 ಗ್ರಾಂ ತೂಕದ ಚಿನ್ನ, 270 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ 5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಅನುಪಮ್ ಅಗರವಾಲ್ ಬಹುಮಾನ ಘೋಷಿಸಿದ್ದಾರೆ.