ವಿಜಯಪುರ: ಜಿಲ್ಲೆಯ ಭೀಮಾ ತೀರದಲ್ಲಿ ಸುಮಾರು 80 ಸಾವಿರ ಮೌಲ್ಯದ ಅಕ್ರಮ ಮರಳನ್ನು ವಶಪಡಿಸಿಕೊಳ್ಳಲಾಗಿದೆ.
ದೇವಣಗಾಂವ, ಶಂಭೇವಾಡ ಗ್ರಾಮಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಿರುವ ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಶಿಂಧೆ, ಸಿಂದಗಿ ತಹಶೀಲ್ದಾರ್ ಸಂಜೀವ್ ಕುಮಾರ ದಾಸರ ತಂಡ ಒಟ್ಟು 180 ಮೆಟ್ರಿಕ್ ಟನ್ಗಳಷ್ಟು ಅನಧಿಕೃತ ಮರಳನ್ನು ವಶಪಡಿಸಿಕೊಂಡಿದ್ದಾರೆ.
![ಅಕ್ರಮ ಮರಳು ವಶಕ್ಕೆ ಪಡೆದ ಅಧಿಕಾರಿಗಳು](https://etvbharatimages.akamaized.net/etvbharat/prod-images/kn-vjp-04-sand-seize-av-7202140_19122020210847_1912f_1608392327_943.jpg)
ಸುಮಾರು 80 ಸಾವಿರ ಮೌಲ್ಯದ ಮರಳು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.