ETV Bharat / state

ವಿಜಯಪುರದ ಮಹಿಳಾ ವಿವಿ ಸ್ಥಾಪನೆ ಉದ್ದೇಶವನ್ನೇ ಮರೆಯಿತಾ ರಾಜ್ಯ ಸರ್ಕಾರ? - Vijayapur is the only women's university in the state

ರಾಜ್ಯದ ಏಕೈಕ ಮಹಿಳಾ ವಿಶ್ವ ವಿದ್ಯಾಲಯವನ್ನು ಸಾಮಾನ್ಯ ವಿಶ್ವ ವಿದ್ಯಾಲಯವನ್ನಾಗಿ ಪರಿವರ್ತನೆ ಮಾಡಿ ಕೋ ಎಜುಕೇಶನ್ ನೀಡಲು ಸರ್ಕಾರ ಚಿಂತನೆ ನಡೆಸುತ್ತಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.

vijayapur-is-the-only-womens-university-in-the-state
ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ
author img

By

Published : Mar 21, 2022, 5:33 PM IST

ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವನ್ನು ಸಾಮಾನ್ಯ ವಿವಿ ಮಾಡುವ ಮೂಲಕ ಕೋ ಎಜುಕೇಶನ್ ಎಂದು ಪರಿಗಣಿಸಲು ಸರ್ಕಾರ ನಡೆಸುತ್ತಿರುವ ಚಿಂತನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಕ್ಕಮಹಾದೇವಿ ವಿಶ್ವವಿದ್ಯಾಲಯವು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಹಿಳಾ ವಿಶ್ವ ವಿದ್ಯಾಲಯವಾಗಿದೆ.

ಮಹಿಳೆಯರ ಸಬಲೀಕರಣ, ಉದ್ಯೋಗಸೃಷ್ಟಿ ಹಾಗೂ ಪ್ರತ್ಯೇಕವಾಗಿ ಯಾವುದೇ ಹಿಂಜರಿಕೆ ಇಲ್ಲದೇ ವಿದ್ಯಾಭ್ಯಾಸ ಮಾಡುವ ಉದ್ದೇಶದಿಂದ ಸುಮಾರು 19 ವರ್ಷಗಳ ಹಿಂದೆ ಈ ಮಹಿಳಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿತ್ತು. ಆರಂಭದಲ್ಲಿ ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕಟ್ಟಡದಲ್ಲಿ ಸಿಬ್ಬಂದಿ ಕೊರತೆ ನಡುವೆ ಮಹಿಳಾ ವಿವಿ ಆರಂಭಗೊಂಡಿತ್ತು. ಬಳಿಕ ನಿರಂತರ ಹೋರಾಟದ ಫಲವಾಗಿ ನಗರದ ಹೊರವಲಯದ ತೊರವಿಯ 117 ಎಕರೆ ಪ್ರದೇಶದಲ್ಲಿ ಅಕ್ಕಮಹಾದೇವಿ ಹೆಸರಿನಲ್ಲಿ ಮಹಿಳಾ ವಿಶ್ವವಿದ್ಯಾಲಯ ಆರಂಭಿಸಲಾಯಿತು.

ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯದ ಸಮಸ್ಯೆಗಳ ಬಗ್ಗೆ ವಿವಿಯ ಕುಲಪತಿಗಳಾದ ಪ್ರೋ. ಬಿ.ಕೆ. ತುಳಸಿಮಾಲಾ ಮಾತನಾಡುತ್ತಿರುವುದು..

ಈ ಮಹಿಳಾ ವಿಶ್ವ ವಿದ್ಯಾಲಯವು ಸಾಮಾನ್ಯ ವಿವಿಗಳ ಪಠ್ಯಕ್ರಮಗಳ ಆಧಾರದ ಮೇಲೆಯೇ ಬೋಧನೆಯನ್ನು ನಡೆಸುತ್ತಾ ಬಂದಿದೆ. ಇದೇ ವಿಷಯ ಈಗ ಮಹಿಳಾ ವಿವಿಗೆ ಮುಳುವಾದಂತಾಗಿದೆ. ರಾಜ್ಯದ ಎಲ್ಲ ಮಹಿಳಾ ಕಾಲೇಜುಗಳನ್ನು ಇದರ ವ್ಯಾಪ್ತಿಗೆ ತರಬೇಕೆನ್ನುವ ಉದ್ದೇಶ ಹೊಂದಲಾಗಿತ್ತು. ಅದರೆ ಇದಕ್ಕೆ ಮೈಸೂರು ಪ್ರಾಂತ್ಯ, ದಕ್ಷಿಣ ಕರ್ನಾಟಕ, ಉತ್ತರ ಕನ್ನಡ ಸೇರಿದಂತೆ ಹಲವು ನಗರದ ವಿದ್ಯಾಲಯಗಳು ವಿರೋಧ ವ್ಯಕ್ತಪಡಿಸಿದ ಕಾರಣ ಬೆರಳಿಕೆಯಷ್ಟು ಮಹಿಳಾ ಮಹಾವಿದ್ಯಾಲಯಗಳು ಮಾತ್ರ ಇದರಲ್ಲಿ ಸೇರ್ಪಡೆಗೊಂಡಿವೆ. ಬಿಸಿಲು ಪ್ರದೇಶ ಎನ್ನುವ ಕಾರಣಕ್ಕೆ ಹಲವು ಭಾಗಗಳಿಂದ ವಿದ್ಯಾರ್ಥಿನಿಯರು ವಿವಿಗೆ ಬರಲು ಹಿಂದೇಟು ಹಾಕಿದ್ದು, ಆದರೂ ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಮಹಿಳಾ ವಿವಿ ತನ್ನದೇ ಆದ ಛಾಪು ಮೂಡಿಸಿದೆ.

ಕಾಯಂ ಸಿಬ್ಬಂದಿ ಕೊರತೆ: 2003ರಲ್ಲಿ ವಿಜಯಪುರದಲ್ಲಿ ರಾಜ್ಯದ ಮೊದಲು ಮಹಿಳಾ ವಿಶ್ವವಿದ್ಯಾಲಯ ಆರಂಭಗೊಂಡಿತ್ತು. ಸದ್ಯ 19 ವರ್ಷ ಪೂರ್ಣಗೊಳಿಸಿದೆ. ಆದರೆ ಕಾಯಂ ಸಿಬ್ಬಂದಿ ಕೊರತೆಯನ್ನು ಈಗಲೂ ಎದುರಿಸುತ್ತಿದೆ. ಒಟ್ಟು ಮಹಿಳಾ ವಿವಿಯಲ್ಲಿ ವಿವಿಧ ವಿಷಯಗಳ ಅಧ್ಯಯನಕ್ಕೆ 32 ಕೋರ್ಸ್ ಗಳನ್ನು ತೆರೆಯಲಾಗಿದೆ. ಒಟ್ಟು ವಿವಿ ವ್ಯಾಪ್ತಿಯಲ್ಲಿ 1500 ಸ್ನಾತಕೋತ್ತರ ಅಭ್ಯಸಿಸುವ ಹಾಗೂ 38,000 ಸ್ನಾತಕ ಪದವಿ ಪಡೆಯುತ್ತಿರುವ ವಿದ್ಯಾರ್ಥಿನಿಯರು ಇದ್ದಾರೆ. ಇನ್ನೂ ಮಹಿಳಾ ವಿವಿ ಆರಂಭಗೊಂಡಾಗ ಒಟ್ಟು 103 ಕಾಯಂ ಬೋಧಕ ಸಿಬ್ಬಂದಿಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಇಲ್ಲಿಯವರೆಗೆ ಕೇವಲ 65 ಬೋಧಕ ಸಿಬ್ಬಂದಿ ಮಾತ್ರ ನೇಮಕ ಮಾಡಲಾಗಿದೆ. ಇನ್ನೂ 38 ಸಿಬ್ಬಂದಿ ಕೊರತೆ ಇದೆ. ಇನ್ನೂ ಬೋಧಕೇತರ ಸಿಬ್ಬಂದಿ 173 ಜನ ಇರಬೇಕಿತ್ತು. ಆದರೆ ಸದ್ಯ 11 ಸಿಬ್ಬಂದಿ ಮಾತ್ರ ಇದ್ದು, ಇನ್ನೂ 157 ಸಿಬ್ಬಂದಿ ಕೊರತೆ ಇದೆ.

ಹೀಗಿರುವಾಗ ಮಹಿಳಾ ವಿವಿಯನ್ನು ಸಾಮಾನ್ಯ ವಿವಿಯಾಗಿ ಪರಿವರ್ತನೆ ಮಾಡಲು ಸರ್ಕಾರ ಮುಂದಾಗಿರುವುದು ವಿದ್ಯಾರ್ಥಿನಿಯರ ಕೊರತೆಯಿಂದಲ್ಲ, ಬದಲಾಗಿ ಸಾಮಾನ್ಯ ವಿವಿಯಲ್ಲಿರುವ ವಿವಿಧ ವಿಷಯಗಳ ಸ್ನಾತಕೋತ್ತರ ಹಾಗೂ ಸ್ನಾತಕ ಪದವಿಯೇ ಮುಖ್ಯ ಕಾರಣ ಎಂದು ಹೇಳಲಾಗ್ತಿದೆ. ಕೋ ಎಜುಕೇಶನ್ ಇದ್ದರೆ ಅನುದಾನವು ಕಡಿಮೆ ಸಾಕಾಗಬಹುದು ಎನ್ನುವ ಲೆಕ್ಕಾಚಾರ ಸಹ ಸರ್ಕಾರದ ಚಿಂತೆಯಲ್ಲಿ ಅಡಗಿದೆ. ಮಹಿಳಾ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ರೂಪಿಸುವ ಸರ್ಕಾರ, ಪ್ರತ್ಯೇಕವಾಗಿ ಅವರ ಕಲಿಕೆಗೆ ಮೀಸಲಿಟ್ಟಿರುವ ವಿವಿಯ ಪರಿವರ್ತನೆಗೆ ಮುಂದಾಗಿರುವುದು ಮಹಿಳಾ ಶಿಕ್ಷಣ ತಜ್ಞರ ಕೆಂಗಣ್ಣಿಗೆ ಗುರಿಯಾಗಿದೆ.

ಓದಿ : ನವೀನ್​ ಮೃತದೇಹ ತಾಯ್ನಾಡಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ, ಇದು ಮೋದಿ ವರ್ಚಸ್ಸು: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.