ETV Bharat / state

2.92 ಕೋಟಿ ಲಾಭ ಗಳಿಸಿದ ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಒಕ್ಕೂಟ - undefined

ಮುಂದಿನ ಐದು ವರ್ಷದಲ್ಲಿ ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಸಂಘ 3 ಲಕ್ಷ ಲೀಟರ್ ಹಾಲು ಉತ್ಪಾದನೆ ಗುರಿ ಹೊಂದಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ನಿರ್ದೇಶಕ ಶ್ರೀಶೈಲಗೌಡ ತಿಳಿಸಿದ್ದಾರೆ.

ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಒಕ್ಕೂಟ
author img

By

Published : Jun 10, 2019, 8:46 PM IST

ವಿಜಯಪುರ: 2018-19ನೇ ಸಾಲಿನಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ 250.62 ಕೋಟಿ ರೂ. ವಹಿವಾಟು ನಡೆಸಿದ್ದು, ಕಳೆದ ವರ್ಷಕ್ಕಿಂತ ಶೇ. 14.5 ರಷ್ಟು ವಹಿವಾಟು ಹೆಚ್ಚಳಗೊಂಡಿದೆ. 27.07 ಕೋಟಿ ರೂ. ಲಾಭ ಗಳಿಸಿದ್ದು, 2.92 ಕೋಟಿ ರೂ. ನಿವ್ವಳ ಲಾಭ ಪಡೆದುಕೊಂಡು ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಸಂಘದ ನಿರ್ದೇಶಕ ಶ್ರೀಶೈಲಗೌಡ ಪಾಟೀಲ ತಿಳಿಸಿದ್ದಾರೆ.

ವಿಜಯಪುರ-ಬಾಗಲಕೋಟೆ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಸ್‌ಒ 22,000 ಗುಣಮಟ್ಟದ ಪ್ರಮಾಣಪತ್ರ ಹೊಂದಿದ್ದು, ಬರದ ಹಿನ್ನೆಲೆಯಲ್ಲಿ ಅವಳಿ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗಾಗಿ 3 ಕೋಟಿ ರೂ. ನೆರವು ನೀಡಲಾಗಿದೆ. ಹಾಲು ಖರೀದಿ ದರದಲ್ಲಿ 1 ರೂ. ಹೆಚ್ಚಿಸಲಾಗಿದೆ. ಪ್ರತಿ 50 ಕೆಜಿ ಚೀಲ ಪಶು ಆಹಾರಕ್ಕೆ 100 ರೂ. ರಿಯಾಯಿತಿ ನೀಡಲಾಗಿದೆ. ಏಪ್ರಿಲ್‌ನಿಂದಲೇ ಹಾಲು ಉತ್ಪಾದಕರ ಖಾತೆಗೆ ಸರ್ಕಾರದಿಂದ ನೇರವಾಗಿ ಹಣ ಜಮೆಯಾಗುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿದ್ದಾರೆ.

ಐದು ವರ್ಷದಲ್ಲಿ 3 ಲಕ್ಷ ಲೀಟರ್ ಹಾಲು ಉತ್ಪಾದನೆ:

ಮುಂದಿನ ಐದು ವರ್ಷದಲ್ಲಿ ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಸಂಘ 3 ಲಕ್ಷ ಲೀಟರ್ ಹಾಲು ಉತ್ಪಾದನೆ ಗುರಿ ಹೊಂದಿದೆ ಎಂದರು. ಸದ್ಯ 1.75 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಇನ್ನಷ್ಟು ಹೆಚ್ಚಳಗೊಳಿಸುವ ಯೋಜನೆ ರೂಪಿಸಲಾಗಿದೆ. ಅವಳಿ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಬಾಗಲಕೋಟೆಯಲ್ಲಿ ಡೇರಿ ನಿರ್ಮಾಣ:

ಬಾಗಲಕೋಟೆ ಜಿಲ್ಲೆಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ 22 ಕೋಟಿ ರೂ. ವೆಚ್ಚದಲ್ಲಿ ಡೇರಿ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಇನ್ನುಳಿದಂತೆ 9.30 ಕೋಟಿ ರೂ. ವೆಚ್ಚದಲ್ಲಿ ಸಿವಿಲ್ ಕಾಮಗಾರಿ, ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್ ಕಾಮಗಾರಿ, 40 ಲಕ್ಷ ರೂ. ವೆಚ್ಚದಲ್ಲಿ ಪ್ಯಾಕಿಂಗ್ ಯಂತ್ರ ಅಳವಡಿಕೆ, ಜಮಖಂಡಿಯಲ್ಲಿ10 ಮೆಟ್ರಿಕ್ ಟನ್ ಸಾಮರ್ಥ್ಯದ 25 ಕೋಟಿ ರೂ. ವೆಚ್ಚದಲ್ಲಿ ಹಾಲಿನ ಪುಡಿ ತಯಾರಿಕೆ ಘಟಕ ಸ್ಥಾಪನೆ, ವಿಜಯಪುರ ಡೇರಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ರೆಫ್ರಿಜಿರೇಷನ್ ವ್ಯವಸ್ಥೆ ಬಲವರ್ಧನೆ ಮತ್ತು ಕೋಲ್ಡ್ ರೂಂ, 5 ಸಾವಿರ ಲೀಟರ್​​​ ಸಾಮರ್ಥ್ಯದ ಐಸ್‌ಕ್ರಿಂ ತಯಾರಿಕೆ ಘಟಕ, ಪರಿಸರ ಸಂರಕ್ಷಣೆಗಾಗಿ 500 ಔಷಧೀಯ ಹಾಗೂ ಇತರ ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Intro:ವಿಜಯಪುರ Body:ವಿಜಯಪುರ :
 2018-19ನೇ ಸಾಲಿನಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ 250.62 ಕೋಟಿ ರೂ. ವಹಿವಾಟು ನಡೆಸಿದ್ದು, ಕಳೆದ ವರ್ಷಕ್ಕಿಂತ ಶೇ.14.5 ರಷ್ಟು ವಹಿವಾಟು ಹೆಚ್ಚಳಗೊಂಡಿದೆ. 27.07 ಕೋಟಿ ರೂ. ವ್ಯಾಪಾರದಿಂದ ಲಾಭಗಳಿಸಿದ್ದು, 2.92 ಕೋಟಿ ರೂ. ನಿವ್ವಳ ಲಾಭ ಪಡೆದುಕೊಂಡು ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಸಂಘದ ನಿರ್ದೇಶಕ ಶ್ರೀಶೈಲಗೌಡ ಪಾಟೀಲ ತಿಳಿಸಿದರು. 
ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಅವರು,
 ಐಎಸ್‌ಒ 22000 ಗುಣಮಟ್ಟದ ಪ್ರಮಾಣಪತ್ರ ಹೊಂದಿದ್ದು, ಬರದ ಹಿನ್ನೆಲೆಯಲ್ಲಿ ಅವಳಿ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗಾಗಿ 3 ಕೋಟಿ ರೂ. ನೆರವು ನೀಡಲಾಗಿದೆ. ಹಾಲು ಖರೀದಿ ದರದಲ್ಲಿ 1 ರೂ. ಹೆಚ್ಚಿಸಲಾಗಿದೆ. ಪ್ರತಿ 50 ಕೆ.ಜಿ ಚೀಲ ಪಶು ಆಹಾರಕ್ಕೆ 100 ರೂ. ರಿಯಾಯಿತಿ ನೀಡಲಾಗಿದೆ. ಏಪ್ರಿಲ್‌ನಿಂದಲೇ ಹಾಲು ಉತ್ಪಾದಕರ ಖಾತೆಗೆ ಸರ್ಕಾರದಿಂದ ನೇರವಾಗಿ ಅವರ ಖಾತೆಗೆ ಹಣ ಜಮೆಯಾಗುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿದರು. 
 ಐದು ವರ್ಷದಲ್ಲಿ 3 ಲಕ್ಷ ಲೀಟರ್ ಹಾಲು ಉತ್ಪಾದನೆ:
 ಮುಂದಿನ ಐದು ವರ್ಷದಲ್ಲಿ ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಸಂಘ 3 ಲಕ್ಷ ಲೀಟರ್ ಹಾಲು ಉತ್ಪಾದನೆ ಗುರಿ ಹೊಂದಿದೆ ಎಂದರು.
 1.75 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಇನ್ನಷ್ಟು ಹೆಚ್ಚಳಗೊಳಿಸುವ ಯೋಜನೆ ರೂಪಿಸಲಾಗಿದೆ. ಅವಳಿ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಮಾಹಿತಿ ನೀಡಿದರು. 
 ಒಟ್ಟು 459 ಹಾಲು ಉತ್ಪಾದನೆ ಸಂಘಗಳಿದ್ದು, ಒಟ್ಟು 67,153  ಸದಸ್ಯರು ಪ್ರತಿದಿನ ಹಾಲು ಪೂರೈಸುತ್ತಿದ್ದಾರೆ. ಪ್ರತಿ ದಿನ 64.7 ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. 8,091 ಕೆಜಿ ಮೊಸರು ಉತ್ಪಾದಿಸಲಾಗುತ್ತಿದೆ.  3 ಸಾವಿರ ಲೀಟರ್ ಹಾಲಿನಿಂದ ಉತ್ಪನ್ನಗಳ ತಯಾರಿಕೆ ಮಾಡಲಾಗುತ್ತಿದೆ. 65 ಸಾವಿರ ಲೀಟರ್ ಬಲ್ಕ್ ಹಾಲು ಮಾರಾಟವಾಗುತ್ತಿದ್ದು, ಕ್ಷೀರಭಾಗ್ಯ ಯೋಜನೆಯಡಿ 65 ಸಾವಿರ ಲೀಟರ್ ಹಾಲು ನೀಡಲಾಗುತ್ತಿದೆ. 824 ಹಾಲು ವಿತರಕರಿದ್ದು, 16 ಕ್ಷೀರ ಮಳಿಗೆ ಹೊಂದಿದೆ. 68 ನಂದಿನಿ ಪ್ರಾಂಚೈಸಿ ಹೊಂದಿದ್ದು, ಮಹಾರಾಷ್ಟ್ರದ ಸೋಲಾಪುರ, ಅಕ್ಕಲಕೋಟ ಮತ್ತು ಉಸ್ಮಾನಾಬಾದ್ ಮಾರುಕಟ್ಟೆಗೆ ಪ್ರತಿ ದಿನ 10 ಸಾವಿರ ಲೀ. ಹಾಲು ಮಾರಾಟ ಮಾಡಲಾಗುತ್ತಿದೆ. ಪ್ರತಿ ತಿಂಗಳು 8 ಮೆಟ್ರಿಕ್ ಟನ್ ತುಪ್ಪ ಮಾರಾಟ ಮಾಡಲಾಗುತ್ತಿದೆ. 11 ಮೆಟ್ರಿಕ್ ಟನ್‌ನಂದಿನಿ ಉತ್ಪನ್ನಗಳಾದ ಪೇಡಾ, ಮಸಾಲಾ ಮಜ್ಜಿಗೆ, ಲಸ್ಸಿ, ಬೆಣ್ಣೆ, ಸುವಾಸಿತ ಹಾಲು, ಜಾಮೂನ್ ಮಿಕ್ಸ್, ಜಾಮೂನ್, ರಸಗುಲ್ಲಾ, ಪನ್ನೀರ್, ಧಾರವಾಡ ಪೇಡಾ, ಬೆಳಗಾವಿ ಕುಂದಾ, ಐಸ್‌ಕ್ರೀಂ, ಹಾಲಿನ ಪುಡಿ ಹಾಗೂ ಇತರ ಸಿಹಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದರು. 
 ಬಾಗಲಕೋಟೆಯಲ್ಲಿ ಡೇರಿ ನಿರ್ಮಾಣ:
 ಬಾಗಲಕೋಟೆ ಜಿಲ್ಲೆಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ 22 ಕೋಟಿ ರೂ. ವೆಚ್ಚದಲ್ಲಿ ಡೇರಿ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಇನ್ನುಳಿದಂತೆ 9.30 ಕೋಟಿ ರೂ. ವೆಚ್ಚದಲ್ಲಿ ಸಿವಿಲ್ ಕಾಮಗಾರಿ, ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್ ಕಾಮಗಾರಿ, 40 ಲಕ್ಷ ರೂ. ವೆಚ್ಚದಲ್ಲಿ ಪ್ಯಾಂಕಿಂಗ್ ಯಂತ್ರ ಅಳವಡಿಕೆ, ಜಮಖಂಡಿಯಲ್ಲಿ 10 ಮೆಟ್ರಿಕ್ ಟನ್ ಸಾಮರ್ಥ್ಯದ 25 ಕೋಟಿ ರೂ. ವೆಚ್ಚದಲ್ಲಿ ಹಾಲಿನ ಪುಡಿ ತಯಾರಿಕೆ ಘಟಕ ಸ್ಥಾಪನೆ, ವಿಜಯಪುರ ಡೇರಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ರೆಫ್ರಿಜಿರೇಷನ್ ವ್ಯವಸ್ಥೆ ಬಲವರ್ಧನೆ ಮತ್ತು ಕೋಲ್ಡ್ ರೂಂ, 5 ಸಾವಿರ ಲೀ. ಸಾಮರ್ಥ್ಯದ ಐಸ್‌ಕ್ರಿಂ ತಯಾರಿಕೆ ಘಟಕ, ಪರಿಸರ ಸಂರಕ್ಷಣೆಗಾಗಿ 500 ಔಷಧೀಯ ಹಾಗೂ ಇತರ ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

 Conclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.