ETV Bharat / state

ಬಾಗಲಕೋಟೆ, ವಿಜಯಪುರದಲ್ಲಿ ಕೇಂದ್ರದ ವಿರುದ್ಧ ಕಾರ್ಮಿಕ ಸಂಘಟನೆಗಳ ಆಕ್ರೋಶ - Protest against central government

ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ನೀಡಿರುವ ಮುಷ್ಕರಕ್ಕೆ ವಿಜಯಪುರ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.‌

various organisations protest against central government
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ
author img

By

Published : Jan 8, 2020, 8:32 PM IST

ವಿಜಯಪುರ/ಬಾಗಲಕೋಟೆ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ನೀಡಿರುವ ಮುಷ್ಕರಕ್ಕೆ ವಿಜಯಪುರ ಹಾಗೂ ಬಾಗಲಕೋಟೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.‌

ವಿಜಯಪುರ ನಗರದಲ್ಲಿ ಹಲವು ಸಂಘಟನೆಗಳ ಸದಸ್ಯರು ಒಟ್ಟಾರೆ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬಾಗಲಕೋಟೆಯಲ್ಲಿ ಜಿಲ್ಲಾಡಳಿತ ಭವನದ ಮುಂದೆ ಆಕ್ರೋಶ ಹೊರ ಹಾಕಿದರು.

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ಎಐಯುಟಿಸಿ ಸಂಘಟನೆ, ಕಾಂಗ್ರೆಸ್ ಮಜ್ದೂರ್​ ಸಂಘಟನೆ, ರೈತ, ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಬ್ಯಾಂಕ್ ನೌಕರರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಮುಷ್ಕರ ನಡೆಸಿದವು. ಅಹಿತಕರ ನಡೆಯದಂತೆ ವಿಜಯಪುರ ನಗರದಲ್ಲಿ 3 ಕೆಎಸ್‌ಆರ್‌ಪಿ ತುಕಡಿ, 9 ಡಿಆರ್​ ತುಕಡಿ‌ ಸೇರಿ 700 ಪೊಲೀಸರು ಬಂದೋಬಸ್ತ್​​ನಲ್ಲಿ ಇದ್ದರು.

ಬಾಗಲಕೋಟೆಯಲ್ಲಿ ಮುಷ್ಕರ ಪರಿಣಾಮ ಎಂದಿನಂತೆಯೇ ಸಾರಿಗೆ ಸಂಸ್ಥೆ ವಾಹನ ಸಂಚಾರ, ಶಾಲಾ, ಕಾಲೇಜು, ಅಂಗಡಿ ‌ಮುಗ್ಗಟ್ಟು, ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಕಾರ್ಯನಿರ್ವಹಿಸಿದವು.

Intro:ವಿಜಯಪುರ: ಕೇಂದ್ರ ಸರ್ಕಾರ ಕಾರ್ಮಿಕ ನೀತಿ ವಿರೋಧಿಸಿ ಇಂದು ಭಾರತ ಭಾರತ‌ ಬಂದ್ ಹಲವಾರು ಪ್ರಗತಿ ಪರ ಸಂಘಟನೆಗಳು‌ ಕರೆ ನೀಡಿದ ಬೆನ್ನಲ್ಲೇ ವಿಜಯಪುರ ನಗರದಲ್ಲಿ ನಿರಸ್ ಪ್ರತಿಕ್ರಿಯೆ ವ್ಯಕ್ತವಾಗಿದೆ.‌

Body:ನಗರದ ಸಿದ್ದೇಶ್ವರ ಮಂದಿರದಿಂದ ಹಲವು ಸಂಘಟನೆಗಳು ಒಟ್ಟಾರೆ ಸೇರಿ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿತ ಗಾಂಧಿ ವೃತ್ತ,ಅಂಬೇಡ್ಕರ್ ವೃತ್ತ ಮಾರ್ಗವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದು, ಪ್ರತಿಭಟನಾ ರ‌್ಯಾಲಿಯಲ್ಲಿ ರೈತ, ಕಾರ್ಮಿಕ, ಅಂಗವಾಡಿ ಕಾರ್ಯಕರ್ತೆಯರು, ಬ್ಯಾಂಕ್ ನೌಕರರು ಸೇರಿದಂತೆ ಹಲು ಸಂಘಟನೆಗಳು ಸೇರಿಕೊಂಡು ಮುಷ್ಕರಕ್ಕೆ ನಡೆಸುತ್ತಿವೆ ಇನ್ನೂ ನಗರದಲ್ಲಿ 3 ಕೆಎಸ್‌ಆರ್‌ಪಿ ತುಂಕಡಿ,9 ಡಿಆರ್ ತುಂಕಡಿ‌ ಸೇರಿ ಒಟ್ಟು 700 ಜನ ಪೊಲೀಸ್ ಸಿಬ್ಬಂದಿ ಅಹಿತರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬದೋಬಸ್ತ ಕೈಗೊಳ್ಳಾಗಿದೆ.

ಬೈಟ್: ಗೌರಿ ಶಂಕರ

Conclusion:ಒಟ್ಟಿನಲ್ಲಿ ಪ್ರಗತಿ ಪರ ಸಂಘಟನೆಯಿಂದ ಕಾರ್ಮಿಕ ನೀತಿ್ಗೆಗೆ ಭಾರಿ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.