ವಿಜಯಪುರ: ಕೊರೊನಾ ಭೀತಿಯು ಕಳೆದ ಮೂರ್ನಾಲ್ಕು ತಿಂಗಳಿಂದ ಎಲ್ಲ ಹಬ್ಬಹರಿದಿನಗಳಿಗೆ ಕೊಕ್ಕೆ ಹಾಕಿತ್ತು. ಆದರೆ ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿದ ಬೆನ್ನಲ್ಲೆ ಗುಮ್ಮಟನಗರಿಯಲ್ಲಿ ಶ್ರಾವಣ ಮಾಸದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿಗೆ ಜೋರಾಗಿ ನಡೆಯುತ್ತಿದೆ.
ಶ್ರಾವಣ ಮಾಸ ಮೊದಲ ಶುಕ್ರವಾರದಿಂದ ಆಚರಣೆ ಮಾಡಲಾಗುವ ಹಬ್ಬಕ್ಕೆ ವಿಜಯಪುರ ನಗರದಲ್ಲಿ ಸಖತ್ ರೆಸ್ಪಾನ್ಸ್ ಕಂಡುಬರ್ತಿದೆ. ನಗರದ ಜನರೆಲ್ಲ ಲಕ್ಷ್ಮೀ ಪೂಜೆಗೆ ಬೇಕಾದ ಹಣ್ಣು, ಹೂವು, ಕಾಯಿ, ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಇತ್ತ ನಾಗರಪಂಚಮಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಪುಲ್ ತಯಾರಿ ಮಾಡುತ್ತಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಕೆಲವರು ಮುಖಕ್ಕೆ ಮಾಸ್ಕ್ ಧರಿಸದೆ ರಸ್ತೆಗಿಳಿರೋದು ಕೊರೊನಾ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ ಎನ್ನಲಾಗುತ್ತಿದೆ. ಲಾಕ್‌ಡೌನ್ ಸಮಯಲ್ಲಿ ಕಡಿಮೆ ಬೆಲೆ ಮಾರಾಟವಾಗುತ್ತಿದ್ದ ಹಣ್ಣು, ಹೂವು, ತರಕಾರಿ ಸೇರಿದಂತೆ ಹಬ್ಬದ ಸಾಮಗ್ರಿಗಳು ದಿಢೀರ್ ದುಬಾರಿಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದತಾಗಿದೆ. ಕಳೆದ ಮೂರು ತಿಂಗಳಿಂದ ನಷ್ಟದಲ್ಲಿದ್ದ ವ್ಯಾಪಾರಿಗಳಿಗೆ ಶ್ರಾವಣ ಮಾಸ ಹೊಟ್ಟೆ ತುಂಬಿಸುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.