ವಿಜಯಪುರ: ಜಿಲ್ಲೆಯ ತಾಳಿಕೋಟೆ ತಾಲೂಕಿನ ಲಕ್ಕುಂಡಿ ಗ್ರಾಮದ ನಿಖಿಲ ಬಸವರಾಜ ಪಾಟೀಲ ಐಎಎಸ್ ಪರೀಕ್ಷೆಯಲ್ಲಿ 139 ನೇ ರ‍್ಯಾಂಕ್ ಗಳಿಸಿದ್ದಾರೆ. ತಂದೆ ಬಸವರಾಜ ಪಾಟೀಲ ಗೋಕಾಕ ತಾಲೂಕಿನ ಘಟಪ್ರಭಾ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಯಿ ಅನ್ನಪೂರ್ಣ ಪಾಟೀಲ ಗೃಹಣಿಯಾಗಿದ್ದಾರೆ.
ಇಬ್ಬರು ಸಹೋದರಿಯರಿದ್ದು ಹಿರಿಯ ಸಹೋದರಿ ಎಮ್‌ಡಿ ಅನಸ್ತೇಶಿಯಾ ಮುಗಿಸಿದ್ದು ಕಲಬುರ್ಗಿಯ ಇಎಸ್‌ಐ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಿರಿಯ ಸಹೋದರಿ ಪಿಯುಸಿ ಕಲಿಯುತ್ತಿದ್ದಾರೆ. 1 ರಿಂದ 7 ಗೋಕಾಕ್ ಪ್ರಾಥಮಿಕ ಶಾಲೆಯಲ್ಲಿ ಕಲಿತಿದ್ದು ಹೈಸ್ಕೂಲ್ ಶಿಕ್ಷಣವನ್ನು ಹಾಗೂ ಪಿಯುಸಿ ಶಿಕ್ಷಣವನ್ನು ಅಳಕಿಯೆ ಸತ್ಯಸಾಯಿ ಲೋಕ ಸೇವಾ ಶಾಲೆಯಲ್ಲಿ ಕಲಿತಿದ್ದಾರೆ.
ಇಂಜನೀಯರಿಂಗ್ ಶಿಕ್ಷಣವನ್ನು ಪಿಇಎಸ್ ಕಾಲೇಜ ಬೆಂಗಳೂರದಲ್ಲಿ ಕಲಿತಿದ್ದಾರೆ. ನಂತರ ದೆಹಲಿಯ ವಾಜಿರಾಮ್ ಕೋಚಿಂಗ್ ಸ್ಕೂಲ್‌ದಲ್ಲಿ ಐಎಎಸ್ ಪರೀಕ್ಷೆಯ ತರಬೇತಿಯನ್ನು ಪಡೆದಿದ್ದಾರೆ. ನಾಲ್ಕನೇ ಪ್ರಯತ್ನದಲ್ಲಿ ಐಎಎಸ್ ಪರೀಕ್ಷೆ ಪಾಸಾಗಿದ್ದು 139 ನೇ ರ‍್ಯಾಂಕ್ ಪಡೆದಿದ್ದಾರೆ.
ಇದನ್ನೂ ಓದಿ: ಕಷ್ಟದ ದಿನಗಳಲ್ಲೂ ಸ್ಥಿರತೆ, ನಮ್ಮ ಗುರಿ ಬಗ್ಗೆ ಸ್ಪಷ್ಟತೆ ಮುಖ್ಯ ಎಂದ UPSC ಟಾಪರ್ ಅಂಕಿತಾ!