ETV Bharat / state

ವಿಜಯಪುರ ಮತ್ತೆರಡು ಕೊರೊನಾ ಪ್ರಕರಣ: ಜನರಿಗೆ ಧೈರ್ಯ ತುಂಬಿದ ಡಿಸಿ - ವಿಜಯಪುರ ಜಿಲ್ಲಾಧಿಕಾರಿ

ಚಪ್ಪರಬಂದ್ ಬಡಾವಣೆಯಲ್ಲಿ ರೋಗಿ ಸಂಖ್ಯೆ 221ರ ವೃದ್ಧೆಯಿಂದಲೇ ಇಂದು ಇಬ್ಬರಿಗೆ ಸೋಂಕು ತಗುಲಿದ್ದು, ಇಲ್ಲಿಯವರೆಗೆ 43 ಪಾಸಿಟಿವ್ ಪ್ರರಕಣ ದೃಢವಾಗಿದೆ. 137 ಜನರ ಗಂಟಲು ದ್ರವ ಮಾದರಿ ವರದಿ ಬಾಕಿ ಇದೆ. ಇನ್ನು ಜಿಲ್ಲೆಯಲ್ಲಿ ಸುಳ್ಳು ಸುದ್ದಿಗಳ ಕುರಿತು ಕಿವಿಗೊಡಬೇಡಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

two more corona case reported in Vijayapura: dc urges people to stay safe
ವಿಜಯಪುರ ಮತ್ತೆರಡು ಕೊರೊನಾ ಪ್ರಕರಣ: ಜನರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿ
author img

By

Published : Apr 30, 2020, 8:37 PM IST

ವಿಜಯಪುರ: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್​ ಪ್ರಕರಣ ದಾಖಲಾಗದೇ ಇರುವುದು ಜಿಲ್ಲೆಯ ಜನತೆಗೆ ರಿಲೀಫ್ ಸಿಕ್ಕಂತಾಗಿತ್ತು. ಆದರೆ ಇಂದು ಮತ್ತೆ 2 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಆತಂಕ ಇನ್ನಷ್ಟು ಹೆಚ್ಚಾಗಿದೆ.

ಚಪ್ಪರ ಬಂದ್ ಬಡಾವಣೆಯಲ್ಲಿ ರೋಗಿ ಸಂಖ್ಯೆ 221ರ ವೃದ್ಧೆಯಿಂದಲೇ ಇಂದು ಇಬ್ಬರಿಗೂ ಸೋಂಕು ತಗುಲಿದೆ. ವಿಜಯಪುರ ನಗರದಲ್ಲಿ ಲಾಕ್​​ಡೌನ್​​ಗೆ ಜನ ಅಷ್ಟಾಗಿ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾಡಳಿತ ಸೀಲ್​ಡೌನ್ ಪ್ರದೇಶ ಸೇರಿದಂತೆ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.

ಅಲ್ಲಲ್ಲಿ ಸಿಸಿ ಟಿವಿ ಅಳವಡಿಸಿದ್ದು, ಈ ಮೂಲಕ ಜನರ ಚಲನವಲನ ಗಮನಿಸಲಾಗುತ್ತಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್​, ಜಿಲ್ಲೆಯಲ್ಲಿ ಒಟ್ಟು 1,943 ಜನರ ಮೇಲೆ ನಿಗಾ ಇರಿಸಲಾಗಿದೆ. 424 ಜನರು 28 ದಿನಗಳ ನಿಗಾ ಮುಗಿಸಿದ್ದಾರೆ ಎಂದರು.

ಇದಲ್ಲದೆ 1,511 ಜನರು 28 ದಿನಗಳ ವಿವಿಧ ನಿಗಾದಲ್ಲಿದ್ದಾರೆ. 57 ಜನರು ಆಸ್ಪತ್ರೆ ಐಸೋಲೇಷನ್​ನಲ್ಲಿದ್ದಾರೆ. 2,012 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. 1,832 ಜನರ ವರದಿ ನೆಗೆಟಿವ್​ ಬಂದಿವೆ. ಇಲ್ಲಿಯವರೆಗೆ 43 ಪಾಸಿಟಿವ್ ಪ್ರಕರಣ ದೃಢವಾಗಿದೆ. 137 ಜನರ ಗಂಟಲು ದ್ರವ ಮಾದರಿ ವರದಿಗೆ ಕಾಯಲಾಗುತ್ತಿದೆ ಎಂದರು.

ಇಂದು ಇಬ್ಬರಲ್ಲಿ ಪಾಸಿಟಿವ್ ದೃಢವಾಗಿದೆ. ರೋಗಿ ನಂಬರ್ 537 ಹಾಗೂ 538 ಅವರು ಇನ್ಸ್​ಸ್ಟಿಟ್ಯೂಷನ್​ ಕ್ವಾರಂಟೈನ್​ನಲ್ಲಿದ್ದರು. ರೋಗಿ ನಂಬರ್ 221 ಸಂಪರ್ಕದಿಂದ ಇವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಯಾವುದೇ ಬಗೆಯ ತೊಂದರೆ ಇಲ್ಲ ಎಂದು ಹೇಳಿದರು.

ಸುಳ್ಳು ವದಂತಿಗೆ ಕಿವಿಗೂಡಬೇಡಿ: ನಗರದಲ್ಲಿ ಕೆಲವರು ಕೊರೊನಾ ವೈರಸ್ ಕುರಿತು ಇಲ್ಲ ಸಲ್ಲದ ಮಾಹಿತಿಗಳನ್ನು ಹರಿಬಿಡುತ್ತಿದ್ದಾರೆ. ಇದರ ಬಗ್ಗೆ ಸಾರ್ವನಿಕರು ಕಿವಿಗೊಡಬಾರದು ಎಂದು ಡಿಸಿ ವೈ.ಎಸ್.ಪಾಟೀಲ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.