ETV Bharat / state

ಬೈಕ್-ಶಾಲಾ ವಾಹನ ನಡುವೆ ಭೀಕರ ಅಪಘಾತ : ಬೈಕ್ ಸವಾರರಿಬ್ಬರ ದಾರುಣ ಸಾವು - Muddebihala

ಘಟನಾ ಸ್ಥಳಕ್ಕೆ ಸಿಪಿಐ ಆನಂದ ವಾಘಮೋಡೆ, ಪಿಎಸ್​​ಐ ರೇಣುಕಾ ಜಕನೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Two killed in an accident at Vijayapura
ಬೈಕ್-ಶಾಲಾ ವಾಹನ ನಡುವೆ ಅಪಘಾತ
author img

By

Published : Oct 27, 2021, 3:00 PM IST

ಮುದ್ದೇಬಿಹಾಳ (ವಿಜಯಪುರ) : ಶಾಲಾ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ತಾಲೂಕಿನ ಜೈನಾಪೂರ ಕ್ರಾಸ್ ಬಳಿ ನಡೆದಿದೆ. ಬೈಕ್ ಸವಾರರಾದ ಚವನಬಾವಿ ಗ್ರಾಮದ ಶಿವಪ್ಪ ಹಣಮಪ್ಪ ಪೂಜಾರಿ(30), ಸಂಗಪ್ಪ ಬಸಪ್ಪ ಪೂಜಾರಿ(40) ಮೃತ ದುರ್ದೈವಿಗಳು.

ಚವನಬಾವಿ ರೇವಣಸಿದ್ದೇಶ್ವರ ಪ್ರಾಥಮಿಕ ಶಾಲೆಯ ವಾಹನ ವಿದ್ಯಾರ್ಥಿಗಳನ್ನು ತುಂಬಿಕೊಂಡು ನಾಲತವಾಡದಿಂದ ಚವನಬಾವಿ ಗ್ರಾಮದ ಕಡೆಗೆ ಬರುತ್ತಿತ್ತು. ಬೈಕ್ ಸವಾರರು ಚವನಬಾವಿಯಿಂದ ನಾಲತವಾಡದತ್ತ ಪ್ರಯಾಣಿಸುತ್ತಿದ್ದರು.

ಘಟನಾ ಸ್ಥಳಕ್ಕೆ ಸಿಪಿಐ ಆನಂದ ವಾಘಮೋಡೆ, ಪಿಎಸ್​​ಐ ರೇಣುಕಾ ಜಕನೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗದಗ: ರೌಡಿಗಳಿಂದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರು ಅರೆಸ್ಟ್‌, ಓರ್ವ ಪರಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.