ETV Bharat / state

ರಸ್ತೆ ನಿಯಮ ಉಲ್ಲಂಘಿಸಿದ ಗೂಡ್ಸ್ ಲಾರಿ ಚಾಲಕ; ಮಾಲೀಕನಿಗೂ ಬಿತ್ತು ದಂಡ - ಗೂಡ್ಸ್ ಲಾರಿ ಮಾಲೀಕನಿಗೆ ದಂಡ ಸುದ್ದಿ

ಪಟ್ಟಣದ ಮುಖ್ಯರಸ್ತೆಯಲ್ಲಿ ಗೂಡ್ಸ್ ವಾಹನವೊಂದು ಅಡ್ಡಾದಿಡ್ಡಿಯಾಗಿ ನಿಂತಿದ್ದರಿಂದ ಸಂಚಾರದಟ್ಟಣೆ ಉಂಟಾಗಿತ್ತು. ಈ ವೇಳೆ ಸವಾರರು, ಸಾರ್ವಜನಿಕರು ಪರದಾಟ ನಡೆಸಬೇಕಾಯಿತು.

ಟ್ರಾಫಿಕ್ ರೂಲ್ಸ್ ಬ್ರೇಕ್
ಟ್ರಾಫಿಕ್ ರೂಲ್ಸ್ ಬ್ರೇಕ್
author img

By

Published : Jun 28, 2020, 1:47 PM IST

ಮುದ್ದೇಬಿಹಾಳ(ವಿಜಯಪುರ) : ಮುಖ್ಯರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಗೂಡ್ಸ್ ವಾಹನ ನಿಲುಗಡೆ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದ ಗೂಡ್ಸ್ ವಾಹನ ಚಾಲಕನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಹುಬ್ಬಳ್ಳಿ-ಮುದ್ದೇಬಿಹಾಳ ಮಾರ್ಗದಲ್ಲಿ ಸರಕು ಸಾಗಾಟ ಮಾಡುವ ವಾಹನದ ಮಾಲೀಕ ಮಹೇಶ ಹಿಕ್ಕಿಮಠ ಎಂಬಾತ ತನ್ನ ಗೂಡ್ಸ್ ವಾಹನದಲ್ಲಿ ಸರಕು ತುಂಬಿಕೊಂಡು ಅಂಗಡಿಯೊಂದಕ್ಕೆ ಅನ್‌ಲೋಡ್ ಮಾಡಲು ಮುಂದಾಗಿದ್ದ. ಗೂಡ್ಸ್ ವಾಹನ ಚಾಲಕ ರಸ್ತೆಯ ಮದ್ಯೆಯೇ ವಾಹನವನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದ ಕಾರಣ ಜನರ ಓಡಾಟಕ್ಕೆ ತೊಂದರೆಯಾಗಿದೆ. ಈ ವೇಳೆ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಟ್ರಾಫಿಕ್ ರೂಲ್ಸ್ ಬ್ರೇಕ್

ತಕ್ಷಣ ಸ್ಥಳಕ್ಕಾಗಮಿಸಿದ ಪಿಎಸ್​​ಐ ಮಲ್ಲಪ್ಪ ಮಡ್ಡಿ ಹಾಗೂ ಸಿಬ್ಬಂದಿ ವಾಹನದ ಮಾಲೀಕ ಮಹೇಶ ಹಿಕ್ಕಿಮಠ ಎಂಬಾತನನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕಾಗಿ 3,000 ರೂ.ದಂಡವನ್ನು ವಿಧಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.