ವಿಜಯಪುರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣದ ಸಂಬಂಧ ಎಲ್ಲ ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಮೇ 15ರವರೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ಭಾರತ ಪುರಾತತ್ವ ಸಮೀಕ್ಷೆಗಳ ಇಲಾಖೆ ನಿರ್ದೇಶಕ ಎನ್.ಕೆ ಪಾಟಕ್ ಆದೇಶಿಸಿದ್ದಾರೆ.
![Tourism close for corona rise, Tourism close for corona rise in Vijayapura, Vijayapura Tourism close, Vijayapura Tourism close news, ಕೊರೊನಾ ಎಫೆಕ್ಟ್ ಐತಿಹಾಸಿಕ ಸ್ಮಾರಕಗಳ ಪ್ರವೇಶಕ್ಕೆ ನಿರ್ಬಂಧ, ವಿಜಯಪುರದಲ್ಲಿ ಕೊರೊನಾ ಎಫೆಕ್ಟ್ ಐತಿಹಾಸಿಕ ಸ್ಮಾರಕಗಳ ಪ್ರವೇಶಕ್ಕೆ ನಿರ್ಬಂಧ, ವಿಜಯಪುರ ಟೂರಿಸಂ ಬಂದ್, ವಿಜಯಪುರ ಟೂರಿಸಂ ಬಂದ್ ಸುದ್ದಿ,](https://etvbharatimages.akamaized.net/etvbharat/prod-images/kn-vjp-03-covid-effect-tourism-close-av-7202140_15042021211856_1504f_1618501736_590.jpg)
ಭಾರತ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿ ಬರುವ ಐತಿಹಾಸಿಕ ಗೋಲಗುಮ್ಮಟ, ಇಬ್ರಾಹಿಂರೋಜಾ, ಮಲಿಕ ಇನ್ ಮೈದಾನ ಸೇರಿ ಉದ್ಯಾನವನ, ವಸ್ತು ಸಂಗ್ರಹಾಲಯ ಸೇರಿದಂತೆ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳನ್ನು ಏ.15 ರಿಂದ ಮುಂದಿನ ಮೇ 15 ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಆದೇಶ ಪ್ರತಿಯಲ್ಲಿ ನಮೂದಿಸಿದ್ದಾರೆ.
ಒಟ್ನಲ್ಲಿ ಕೊರೊನಾ ಹಾವಳಿಯಿಂದ ಪ್ರವಾಸಿ ತಾಣಕ್ಕೆ ಈಗ ಕುತ್ತು ಬಂದಂತಾಗಿದೆ.