ETV Bharat / state

ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡರೇ ತಪ್ಪೇನಿದೆ: ಸಂಸದ ರಮೇಶ ಜಿಗಜಿಣಗಿ - ramesh jigajinagi talked about jds bjp alliance

ಲೋಕಸಭೆ ಚುನಾವಣೆಗೆ ಬಿಜೆಪಿ ಜೆಡಿಎಸ್​ ಮೈತ್ರಿ ಮಾಡಿಕೊಂಡರೆ ತಪ್ಪೇನಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ಸಂಸದ ರಮೇಶ ಜಿಗಜಿಣಗಿ
ಸಂಸದ ರಮೇಶ ಜಿಗಜಿಣಗಿ
author img

By ETV Bharat Karnataka Team

Published : Sep 9, 2023, 3:30 PM IST

Updated : Sep 9, 2023, 4:33 PM IST

ರಮೇಶ ಜಿಗಜಿಣಗಿ ಹೇಳಿಕೆ

ವಿಜಯಪುರ: ಎಚ್.ಡಿ.ದೇವೇಗೌಡ ಅವರು ಕರ್ನಾಟಕ ಮುಖ್ಯಮಂತ್ರಿ ಇದ್ದಾಗ, ತಾವು ಸಹ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್ - ಬಿಜೆಪಿ ಮೈತ್ರಿಯಾದರೆ ತಪ್ಪೇನು ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನೂತನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಪೂರ್ವ ಮೈತ್ರಿಯನ್ನು ನಮ್ಮ ನಾಯಕರು ಹೈಕಮಾಂಡ್ ಮಟ್ಟದಲ್ಲಿ ಮಾಡಿಕೊಂಡರೆ ತಮ್ಮದು ಯಾವುದೇ ಅಭ್ಯಂತರವಿಲ್ಲ. ಜೆಡಿಎಸ್ ಜತೆ ಯಾರೇ ಮೈತ್ರಿಗೆ ಬಂದರೂ ಸಹ ಸ್ವಾಗತಿಸುತ್ತೇವೆ. ಬೇಕಾದರೆ ನೀವು ಬನ್ನಿ ಬೇಡ ಅನ್ನುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉದಯನಿಧಿ ಹೇಳಿಕೆಗೆ ಖಂಡನೆ: ಸನಾತನ ಹಿಂದೂ ಧರ್ಮದ ಬಗ್ಗೆ ತಮಿಳುನಾಡು ಸಚಿವ ಹಾಗೂ ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದ ಅವರು, ಸಣ್ಣ ಸಣ್ಣ ಹುಡುಗರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಉದಯನಿಧಿ ಇಂದು ನಿನ್ನೆ ಮಂತ್ರಿಯಾಗಿದ್ದಾರೆ. ನಾವು ಇಂದಿರಾಗಾಂಧಿ, ರಾಜೀವಗಾಂಧಿ, ಸಂಜಯಗಾಂಧಿ ಕಾಲದಲ್ಲಿ ನೋಡಿದ್ದೇನೆ. ಧರ್ಮದ ವಿಷಯದಲ್ಲಿ ಯಾರು ಕೈ ಹಾಕುತ್ತಾರೆ ಅವರು ಮತ್ತು ಅವರ ಪಕ್ಷವೂ ಉಳಿಯಲ್ಲ. ಧರ್ಮದ ವಿಷಯದಲ್ಲಿ ಯಾರೂ ಕೂಡ ಯಾವ ಪಕ್ಷದವರು ಸಹ ಭಾಗಿಯಾಗಬಾರದು. ಧರ್ಮದಲ್ಲಿ ಕೈ ಹಾಕಿದವರು ಈ ದೇಶದಲ್ಲಿ ಉಳಿದಿಲ್ಲ ಎಂದು ಪುನರುಚ್ಚರಿಸಿದರು.

ಇಂಡಿಯಾ ಬದಲು ಭಾರತ ಸ್ವದೇಶಿ ಕೂಗು: ಇಂಡಿಯಾ ಬದಲು ದೇಶಕ್ಕೆ ಭಾರತ ಹೆಸರು ಕರೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿರುವುದನ್ನು ಸಂಸದ ರಮೇಶ ಜಿಗಜಿಣಗಿ ಸ್ವಾಗತಿಸಿದರು. ಎಲ್ಲ ದೇಶಗಳಿಗೆ ಒಂದೇ ಹೆಸರು, ಭಾರತಕ್ಕೆ ಯಾಕೆ ಎರಡು ಹೆಸರು ಎಂದು ಪ್ರಶ್ನಿಸಿದರು. ಸ್ವಾತಂತ್ರ ಪೂರ್ವ ವಿದೇಶಿಗರು ಇಂಡಿಯಾ ಎಂದು ಕರೆಯುತ್ತಿದ್ದರು. ಇಂದು ನಾವ್ಯಾಕೆ ಅದೇ ಹೆಸರನ್ನು ಕರೆಯಬೇಕು. ಭಾರತ ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಭಾರತ ನಮ್ಮ ಹೆಮ್ಮೆ, ಹೀಗಾಗಿ ಭಾರತ ಹೆಸರು ಕರೆಯೋದಕ್ಕೆ ನನ್ನದೂ ಸಹಮತ ಇದೆ ಎಂದರು.

ಟಿಕೆಟ್ ಆಕಾಂಕ್ಷಿಗಳಿಗೆ ಖಡಕ ಉತ್ತರ: ವಿಜಯಪುರ ಮೀಸಲು ಲೋಕಸಭೆ ಸ್ಥಾನಕ್ಕೆ ಮತ್ತೊಮ್ಮೆ ಸ್ಪರ್ಧಿಸಲು ತಾವು ಬಯಸಿದ್ದೇನೆ. ಜನರ ಅಭಿಪ್ರಾಯ ಸಹ ಇದೆ ಆಗಿದೆ. ಆದರೆ ಕೆಲವರು ತಾವು ಸ್ಪರ್ಧಿಸಬೇಕೆಂದು ತಮ್ಮ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶ ಹೊರ ಹಾಕಿದರು. ಸಾವಿರ ಜನ ಟಿಕೆಟ್ ಆಕ್ಷಾಂಕಿಗಳು ಬರಲಿ, ಅದನ್ನು ಬಹಿರಂಗವಾಗಿ ಹೇಳಲಿ ಅದು ಬಿಟ್ಟು ಸಣ್ಣ ಸಣ್ಣ ಹುಡುಗರಿಗೆ ರಾತ್ರಿ ವ್ಯವಸ್ಥೆ ಮಾಡಿ, ಸಾಮಾಜಿಕ ಜಾಲಜಾಣದಲ್ಲಿ ಅಪಪ್ರಚಾರ ಮಾಡಿಸುತ್ತಿದ್ದಾರೆ ಇದು ಸರಿಯಲ್ಲ. ಹೈ ಕಮಾಂಡ್ ಟಿಕೆಟ್ ತಮಗೆ ನೀಡುತ್ತದೆ ಎನ್ನುವ ಭರವಸೆ ನನಗೆ ಇದೆ ಎಂದು ಹೇಳಿದರು. ನಾನು ಈಗಾಗಲೇ 12 ಚುನಾವಣೆ ಎದುರಿಸಿದ್ದೇನೆ. ಅದರಲ್ಲಿ 11 ಬಾರಿ ಗೆಲುವು ಸಾಧಿಸಿ ಒಮ್ಮೆ ಮಾತ್ರ ಸೋತಿದ್ದೇನೆ. ಅದು ಜನ ನನ್ನ ಮೇಲೆ ಇಟ್ಟಿರುವ ನಂಬಿಕೆಯಾಗಿದೆ ಎಂದರು.

ಇದನ್ನೂ ಓದಿ: ಜೆಡಿಎಸ್​ನವರು ಜಾತ್ಯತೀತ ಎಂದು ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಮೈತ್ರಿಗೆ ಮುಂದಾಗಿರುವುದು ದುರ್ದೈವದ ಸಂಗತಿ: ಸಿಎಂ ಸಿದ್ದರಾಮಯ್ಯ

Last Updated : Sep 9, 2023, 4:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.