ವಿಜಯಪುರ: ನಗರದ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊವಿಡ್-19 ಕಾಯಿಲೆ ತಡೆಗಟ್ಟುವ ಸ್ಪುಟ್ನಿಕ್ ವಿ ಲಸಿಕೆ ಜು.12 ರಿಂದ ಲಭ್ಯವಾಗಲಿದೆ ಎಂದು ಉಪಕುಲಪತಿ ಡಾ.ಆರ್.ಎಸ್.ಮುಧೋಳ ತಿಳಿಸಿದ್ದಾರೆ.
ಸ್ಪುಟ್ನಿಕ್ ಲಸಿಕೆ ಕೊವಿಡ್ ಸೋಂಕಿನ ವಿರುದ್ಧ ಶೇ.92 ರಷ್ಟು ಯಶಸ್ವಿಯಾಗಿ ಹೋರಾಡುವ ಸಾಮರ್ಥ್ಯ ಹೊಂದಿದ್ದು, ಈ ಲಸಿಕೆಯನ್ನು ಸಾರ್ವಜನಿಕರಿಗೆ ಬಿ.ಎಲ್.ಡಿ.ಇ ಸೂಪರ್-ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5ಗಂಟೆ ವರೆಗೆ ನೀಡಲಾಗುವುದು.
ಮೊದಲ ಲಸಿಕೆ ಪಡೆದ 21 ದಿನಗಳಲ್ಲಿಯೇ ಎರಡನೇ ಡೋಸ್ ನೀಡಲಾಗುತ್ತದೆ. ಪ್ರತಿ ಡೋಸ್‍ಗೆ ಸರ್ಕಾರ 1,145 ರೂ. ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ : ನಿವಾಸಕ್ಕೆ ಕೈ ನಾಯಕರನ್ನು ಕರೆಸಿಕೊಂಡು ಶಕ್ತಿ ಪ್ರದರ್ಶನ ಮಾಡುತ್ತಿದ್ದಾರಾ ಡಿಕೆಶಿ!?