ಧಾರಾಕಾರ ಮಳೆ... ಜಲಾವೃತ ಸಂಗಮನಾಥನಿಗೆ ನೀರಲ್ಲೇ ವಿಶೇಷ ಪೂಜೆ - undefined
ರಾತ್ರಿ ಸುರಿದ ಮಳೆಯಿಂದಾಗಿ ಹಳ್ಳದ ಪಕ್ಕದಲ್ಲಿರುವ ಸಂಗಮನಾಥ ದೇವಸ್ಥಾನ ಜಲಾವೃತವಾಗಿದೆ. ಮೊಣಕಾಲಿನ ವರೆಗೆ ನೀರು ನಿಂತಿದ್ದರೂ ನೀರಿನಲ್ಲೇ ಸಂಗಮನಾಥನಿಗೆ ಪೂಜೆ ಸಲ್ಲಿಸಲಾಗಿದೆ.
ವಿಜಯಪುರ: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತಿಕೋಟಾ ತಾಲೂಕಿನ ಕಳ್ಳಕವಟಗಿ ಸಂಗಮನಾಥ ಹಳ್ಳ ತುಂಬಿ ಹರಿಯುತ್ತಿದೆ. 3-4 ವರ್ಷದಿಂದ ಮಳೆ ಬಾರದ ಕಾರಣ ಹಳ್ಳದಲ್ಲಿ ನೀರು ಇರಲಿಲ್ಲ. ರಾತ್ರಿ ಸುರಿದ ಮಳೆಯಿಂದಾಗಿ ಹಳ್ಳದ ಪಕ್ಕದಲ್ಲಿರುವ ಸಂಗಮನಾಥ ದೇವಸ್ಥಾನ ಜಲಾವೃತವಾಗಿದೆ. ಮೊಣಕಾಲಿನ ವರೆಗೆ ನೀರು ನಿಂತಿದ್ದರೂ ಸಹ ನೀರಿನಲ್ಲೇ ಸಂಗಮನಾಥನಿಗೆ ಪೂಜೆ ಸಲ್ಲಿಸಲಾಗಿದೆ.
ನೀರಿನೊಂದಿಗೆ ಹರಿದು ಹೋದ ಪಲ್ಲಕ್ಕಿ :
ರಾತ್ರಿಯಿಡಿ ಸುರಿದ ಭಾರಿ ಮಳೆಗೆ ದೇವಸ್ಥಾನದ ಹೊರಗಡೆ ಇಟ್ಟಿದ್ದ ದೇವರ ಪಲ್ಲಕ್ಕಿ ಸಹ ಹಳ್ಳದಲ್ಲಿ ಹರಿದುಕೊಂಡು ಹೋಗಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ನೀರು ನುಗ್ಗಿದ ಹಿನ್ನೆಲೆ ಇಂದಿನ ಪೂಜಾ ಕಾರ್ಯಕ್ರಮ ದೇವಸ್ಥಾನದ ಹೊರಗಡೆ ನಡೆಯಿತು.
ರೈತರ ಮೊಗದಲ್ಲಿ ಸಂತಸ :
ದ್ರಾಕ್ಷಿ ಬೆಳೆಗಾರರ ಪಾಲಿಗೆ ಮಳೆ ವರವಾಗಿದೆ. ಇಂದಿನಿಂದ ರೈತರು ದ್ರಾಕ್ಷಿ ಕಟಾವು ಮಾಡಲು ಪ್ರಾರಂಭಿಸಿದ್ದಾರೆ. ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ತಿಕೋಟಾ, ಬಿಜ್ಜರಗಿ, ಹುಬನೂರ, ಟಕ್ಕಳಕಿ, ಸೋಮದೇವರಹಟ್ಟಿ ಎಲ್ಲ ಭಾಗಗಳಲ್ಲೂ ಮಳೆಯಾಗಿದೆ.