ಮುದ್ದೇಬಿಹಾಳ : ತಾಲ್ಲೂಕಾಡಳಿತದಿಂದ 65 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೋವಿಡ್-19 ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ಸನ್ಮಾನ ಸಮಾರಂಭವನ್ನು ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಸಂಪದ್ಭರಿತವಾದ ರಾಜ್ಯ ಕರ್ನಾಟಕ. ಮುಂದಿನ ಹತ್ತು ವರ್ಷಗಳಲ್ಲಿ ಕೃಷಿ ಸಂಬಂಧಿತ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಉಪನ್ಯಾಸಕ ಪ್ರಕಾಶ ನರಗುಂದ ಮಾತನಾಡಿ, ಇಂದಿಗೂ ಕನ್ನಡವನ್ನು ಅನ್ಯಭಾಷೆಯಂತೆ ಕಾಣುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಮಾತೃಭಾಷೆ ಕನ್ನಡ ಎಂದಿಗೂ ಮರೆಯಬಾರದು ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಶಹಜಾದಬಿ ಹುಣಸಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ತಹಶೀಲ್ದಾರ್ ಜಿ.ಎಸ್.ಮಳಗಿ, ಸಿಪಿಐ ಆನಂದ ವಾಘಮೋಡೆ, ಮುಖ್ಯಾಧಿಕಾರಿ ಗೋಪಾಲ ಕಾಸೆ, ಡಾ.ಪ್ರಕಾಶ ನರಗುಂದ, ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ಸಂಗೀತಾ ದೇವರಳ್ಳಿ, ಬಸಪ್ಪತಟ್ಟಿ, ಭಾರತಿ ಪಾಟೀಲ, ಪ್ರೀತಿ ದೇಗಿನಾಳ, ಅಶೋಕ ವನಹಳ್ಳಿ ಸೋನಾಬಾಯಿ ನಾಯಕ, ದ್ರಾಕ್ಷಿ, ಮಹಿಬೂಬ ಗೊಳಸಂಗಿ, ಬಿಇಒ ವೀರೇಶ ಜೇವರಗಿ, ಟಿ.ಡಿ.ಲಮಾಣಿ ಇದ್ದರು. ಇದೇ ವೇಳೆ ತಾಲೂಕಿನ ಪತ್ರಕರ್ತರನ್ನು ಸನ್ಮಾನಿಸಲಾಯಿತು.