ಮುದ್ದೇಬಿಹಾಳ: ತಾಲೂಕಿನ ಕಾಳಗಿ ಸರ್ಕಾರಿ ಆಸ್ಪತ್ರೆಯಲ್ಲಿದ್ದ ‘108’ ಆರೋಗ್ಯ ಕವಚ ವಾಹನಕ್ಕೆ ಕೊನೆಗೂ ಕಾಯಕಲ್ಪ ನೀಡಲಾಗಿದ್ದು, ಗುರುವಾರ ಸಂಜೆಯಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ.
ಕಾಳಗಿ ಗ್ರಾಮದಲ್ಲಿರುವ ಆರೋಗ್ಯ ಕವಚ ವಾಹನಕ್ಕೆ ಸರಿಯಾದ ಟೈರ್‌ಗಳಲ್ಲಿದೆ ಸಂಚರಿಸಲು ಕಷ್ಟವಾಗಿದ್ದು ಅದನ್ನು ಬದಲಾಯಿಸಿ ಬೇರೆಯ ವಾಹನ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಈ ಕುರಿತು 'ಈಟಿವಿ ಭಾರತ' ದಲ್ಲಿ ‘ಕಾಯಕಲ್ಪ ಪ್ರಶಸ್ತಿ ಪಡೆದ ಆಸ್ಪತ್ರೆಯಲ್ಲೇ ಆಂಬ್ಯುಲೆನ್ಸ್ಗೆ ಅನಾರೋಗ್ಯ’ ಎಂಬ ಶೀರ್ಷಿಕೆಯಡಿ ಸೆ.7ರಂದು ವರದಿ ಬಿತ್ತರವಾಗಿತ್ತು.
ಅಲ್ಲದೇ, ಮುದ್ದೇಬಿಹಾಳಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಭೇಟಿ ನೀಡಿದ್ದ ವೇಳೆ ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಅವರು ಆಂಬ್ಯುಲೆನ್ಸ್ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆರೋಗ್ಯ ಕವಚ ವಾಹನಕ್ಕೆ ಹೊಸ ಟೈರ್‌ಗಳನ್ನು ಜಿವಿಕೆ ಸಂಸ್ಥೆಯಿಂದ ಪೂರೈಸಲಾಗಿದೆ. ಜಿಲ್ಲಾ ಕೋಆರ್ಡಿನೇಟರ್ ಸಂತೋಷ ಅವರು ಆಂಬ್ಯುಲೆನ್ಸ್ಅನ್ನು ಸಾರ್ವಜನಿಕರ ಸೇವೆಗೆ ತ್ವರಿತವಾಗಿ ದೊರೆಯುವಂತೆ ನೋಡಿಕೊಂಡಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಮುದ್ದೇಬಿಹಾಳ: ಕಾಯಕಲ್ಪ ಪ್ರಶಸ್ತಿ ಪಡೆದ ಆಸ್ಪತ್ರೆಯಲ್ಲೇ ಆಂಬ್ಯುಲೆನ್ಸ್ಗೆ ಅನಾರೋಗ್ಯ!
ಈ ಕುರಿತು ಮಾತನಾಡಿರುವ ಗ್ರಾಮಸ್ಥ ಮಹಾಂತೇಶ ಕಾಳಗಿ, ಹುಸೇನ್ ಮುಲ್ಲಾ ಆಂಬ್ಯುಲೆನ್ಸ್ಗೆ ಹೊಸ ಟೈರ್‌ಗಳನ್ನು ಪೂರೈಸಲಾಗಿದ್ದು ಮತ್ತೆ ಚಾಲನೆ ಸಿಕ್ಕಿರುವುದು ಸಂತಸದ ವಿಚಾರ. ನಮ್ಮೂರಿನ ಆಂಬ್ಯುಲೆನ್ಸ್ ಸಮಸ್ಯೆ ಸರಿಪಡಿಸಲು ಕಾರಣರಾದ 'ಈಟಿವಿ ಭಾರತ' ನ್ಯೂಸ್ ಮತ್ತು ಆರೋಗ್ಯ ಕವಚ ಮೇಲಾಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.