ವಿಜಯಪುರ: ಹೊಸ ವರ್ಷದ ಮುನ್ನಾ ದಿನವೇ ಇಬ್ಬರು ವೃದ್ಧೆಯರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಬಳಿ ನಡೆದಿದೆ.
ತಿಪ್ಪವ್ವ ಕಮತಗಿ (60) ಹಾಗೂ ಗುರಬಾಯಿ ಗಣಿ (65) ಮೃತ ದುರ್ದೈವಿಗಳು. ಕೊಣ್ಣೂರಿನಿಂದ ಜಾಲವಾದ ಗ್ರಾಮಕ್ಕೆ ವೃದ್ಧೆಯರು ಟಂಟಂ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿಯಾಗಿ ಈ ದುರ್ಘಟನೆ ನಡೆದಿದ್ದು, ಆರು ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಓದಿ : ಹೊಸ ವರ್ಷದ ನೆಪದಲ್ಲಿ ಜನಜಂಗುಳಿ ತಡೆಗೆ ಸೆಕ್ಷನ್ 144 ಜಾರಿ: ಬೊಮ್ಮಾಯಿ ಸ್ಪಷ್ಟನೆ
ಈ ಸಂಬಂಧ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.