ETV Bharat / state

ತಾಳಿಕೋಟೆ ಖಾಸ್ಗತೇಶ್ವರ ಜಾತ್ರೋತ್ಸವ : ಮೊಸರು ಗಡಿಗೆ ಒಡೆದು ಸಂಭ್ರಮಿಸಿದ ಭಕ್ತರು - ಗೋಪಾಲ ಕಾವಲಿ

ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ವಿಜಯ ವಿಠ್ಠಲನಿಗೆ ಇಂದು ಪೀಠಾಧಿಪತಿ ಸಿದ್ದಲಿಂಗ ದೇವರ ನೇತೃತ್ವದಲ್ಲಿ ಘೃತಾಮೃತ ಗೋಪಾಲ ಕಾವಲಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

talikote-kasgatheshwara-fest
ತಾಳಿಕೋಟೆ ಖಾಸ್ಗತೇಶ್ವರ ಜಾತ್ರೋತ್ಸವ
author img

By

Published : Jul 11, 2022, 2:47 PM IST

ವಿಜಯಪುರ: ಕೋವಿಡ್​ ಕಾರಣದಿಂದ ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ತಾಳಿಕೋಟೆಯ ಆರಾಧ್ಯ ದೈವ ಶ್ರೀ ಖಾಸ್ಗತೇಶ್ವರ ಮಠದ ಜಾತ್ರೆಯನ್ನು ಇಂದು ಸಂಭ್ರಮದಿಂದ ಆಚರಿಸಲಾಯಿತು. ಮೊಸರು ಗಡಿಗೆ ಒಡೆಯುವ ಗೋಪಾಲ ಕಾವಲಿಯನ್ನು ವೀಕ್ಷಿಸಲು ಭಾನುವಾರ ರಾತ್ರಿಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ತಾಳಿಕೋಟೆ ಮಾತ್ರವಲ್ಲದೆ ದೂರದ ಊರುಗಳಿಂದಲೂ ಆಗಮಿಸಿದ್ದರು.

ಇಂದು ಬೆಳಗ್ಗಿನ ಜಾವ 5 ಗಂಟೆಗೆ ಸಾವಿರಾರು ಜನರ ಖಾಸ್ಗತ ಖಾಸ್ಗತ ಎಂಬ ಘೋಷದ ಮಧ್ಯ ಖಾಸ್ಗತೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ದೇವರ ನೇತೃತ್ವದಲ್ಲಿ ಮೊಸರ ಗಡಿಗೆ (ಗೋಪಾಲ ಕಾವಲಿ)ಯನ್ನು ಸಂಗಯ್ಯ ವಿರಕ್ತಮಠ ಶಾಸ್ತ್ರೋಕ್ತವಾಗಿ ಒಡೆದರು. ಇದಕ್ಕೂ ಮುನ್ನ ಯುವಕರ ಗುಂಪುಗಳು ಜೀವದ ಹಂಗನ್ನು ತೊರೆದು ಮಾನವ ಗೋಪುರಗಳನ್ನು ಮಾಡಿ ಎತ್ತರದಲ್ಲಿ ಕಟ್ಟಿದ ಮೊಸರು ಗಡಿಗೆಯನ್ನು ಮುಟ್ಟಲು ಪೈಪೋಟಿ ನಡೆಸಿದ ದೃಶ್ಯ ಗಮನ ಸೆಳೆಯಿತು.

ಗೋಪಾಲ ಕಾವಲಿ ಮೊಸರು ಗಡಿಗೆ ಒಡೆಯುವ ಆಚರಣೆ ಹಿನ್ನೆಲೆ : ವಿಜಯನಗರ ಕಾಲದಲ್ಲಿ ಆಷಾಢ ಶುದ್ಧ ಏಕಾದಶಿ ದಿನ ವಿಜಯ ವಿಠ್ಠಲನಿಗೆ ಘೃತಾಮೃತ ಗೋಪಾಲ ಕಾವಲಿ (ಮೊಸರು ಗಡಿಗೆ ಒಡೆಯುವ) ಆಚರಣೆ ನಡೆಯುತ್ತಿತ್ತು. ನಂತರ ಬಹುಮನಿ ಸುಲ್ತಾನರ ಪಾಲಾದ ವಿಜಯನಗರ ಹಾಳು ಹಂಪೆಯಾದಾಗ ಹಂಪೆಯ ವಿಜಯ ವಿಠ್ಠಲನ ಮೂರ್ತಿಯನ್ನು ಪಂಢರಾಪುರದಲ್ಲಿ ಪ್ರತಿಷ್ಠಾಪಿಸಲಾಯಿತೆಂದು ಹೇಳಲಾಗುತ್ತದೆ.

ತಾಳಿಕೋಟೆ ಖಾಸ್ಗತೇಶ್ವರ ಜಾತ್ರೋತ್ಸವ

ಖಾಸ್ಗತ ಮಠದ ಮಹಾರಾಷ್ಟ್ರವಾಸಿ ಭಕ್ತರಿಗೆ ವಿಠ್ಠಲನ ದರ್ಶನ ಮಾಡಿಸಬೇಕು ಎಂಬ ಬಯಕೆ ಹೊತ್ತ ಈ ಹಿಂದಿನ ಶ್ರೀ ಖಾಸ್ಗತರು ಪಂಢರಾಪುರ ಮೊಸರು ಗಡಿಗೆ ಸಂಪ್ರದಾಯವನ್ನು ತಮ್ಮ ಮಠದಲ್ಲಿ ಪ್ರಾರಂಭಿಸಿದರು. ಹೊಸದಾದ ಗಡಿಗೆ ತೆಗೆದುಕೊಂಡು ಅದಕ್ಕೆ ವಿಭೂತಿ ಕುಂಕುಮಗಳಿಂದ ಶುದ್ಧೀಕರಣ ಮಾಡಿ ಅದರಲ್ಲಿ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಹಣ್ಣಿನ ರಸ, ಅವಲಕ್ಕಿ ಮಿಶ್ರಣ ಮಾಡಿ ಎತ್ತರಕ್ಕೆ ಕಟ್ಟಲಾಗುತ್ತದೆ.

ಆಷಾಢ ರಾತ್ರಿ ದಶಮಿ ಕಳೆದು, ಒಂದು ವಾರದಿಂದ ನಡೆದ ಭಜನೆಯ ಮಣೆ ಇಳಿದು, ಜಂಗಮ ಮೂರ್ತಿಗಳು ಊರ ಪ್ರದಕ್ಷಿಣೆ ಹಾಕಿ ಸರಿಯಾಗಿ 5 ಗಂಟೆಗೆ ಮಠ ತಲುಪಿ, ಏಣಿಯನ್ನೇರಿ ಮೊಸರು ಗಡಿಗೆಯನ್ನು ಒಂದೆರಡು ಬಾರಿ ತೂಗಾಡಿಸಿ ಗಡಿಗೆಯನ್ನು ಬೆತ್ತದಿಂದ ಒಡೆದಾಗ ಕಿಕ್ಕಿರಿದು ತುಂಬಿದ ಭಕ್ತರ ಮೇಲೆ ಮೊಸರು ಸುರಿಸುತ್ತಾರೆ.

ಮೈಮೇಲೆ ಮೊಸರು ಚೆಲ್ಲಿದ್ದರಿಂದ ವರ್ಷವಿಡೀ ಒಳ್ಳೆಯದಾಗುತ್ತದೆ, ಸುಖ ಶಾಂತಿ ನೆಲೆಸುತ್ತದೆ ಮತ್ತು ಚರ್ಮರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇಲ್ಲಿನವರಲ್ಲಿದೆ. ಜೀವದ ಹಂಗನ್ನು ತೊರೆದು ಹರಸಾಹಸ ಮಾಡಿ ಗಡಿಗೆಯ ಚೂರನ್ನು ಪಡೆದು, ಅದನ್ನು ದೇವರ ಜಗಲಿ ಮೇಲೆ ಇಟ್ಟು ಭಕ್ತಿಯಿಂದ ಪೂಜಿಸುತ್ತಾರೆ. ಮೊಸರು ಗಡಿಗೆಯನ್ನು ಒಡೆಯುವ ವೇಳೆಯಲ್ಲಿ ಜಾತಿ ಭೇದವಿಲ್ಲದೆ ಸಾವಿರಾರು ಭಕ್ತರು ಸೇರುತ್ತಾರೆ.

ಗೋಪಾಲ ಕಾವಲಿಗೂ ಮುನ್ನ ಭಕ್ತರು ದೀಡ ನಮಸ್ಕಾರ ಹಾಕುವ ಸಂಪ್ರದಾಯವಿದೆ. ಭಾನುವಾರ ರಾತ್ರಿ 11 ಗಂಟೆಗೆ ಹರಕೆ ಹೊತ್ತವರು ತಣ್ಣೀರು ಸ್ಥಾನ ಮಾಡಿ ಸುಮಾರು 1ಕಿ.ಮೀ. ದೂರದಿಂದ ಮಠದವರೆಗೂ ದೀ‌ಡ ನಮಸ್ಕಾರ ಹಾಕಿದರು. ಇದರಿಂದ ದೇಹ ದಂಡಿಸಿದಂತಾಗುತ್ತದೆ ಮತ್ತು ಭಕ್ತಿಯಿಂದ ಬೇಡಿಕೊಂಡ ಬಯಕೆಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರದ್ದು.

ಈ ಬಾರಿಯ ಜಾತ್ರೆಗೆ ಕಳೆದ ಹತ್ತು ದಿನಗಳಿಂದ ಮಠದ ಭಕ್ತರು ಸಡಗರ ಸಂಭ್ರಮದಿಂದ ಸಿದ್ಧತೆ ನಡೆಸಿದ್ದು, ಸಪ್ತಭಜನೆ, ನಿತ್ಯ ದಾಹೋಸ, ವಿಶೇಷವಾಗಿ ರೊಟ್ಟಿ ಊಟದ ರುಚಿಯ ದಾಸೋಹವನ್ನ ಕೈಗೊಳ್ಳಲಾಗಿತ್ತು. ನಾಳೆ ಶ್ರೀಗಳ ಅಂಬಾರಿ ಮೆರವಣಿಗೆ ಹಾಗೂ ಸಂಜೆ ರಥೋತ್ಸವ ನಡೆಯಲಿದೆ.

ಇದನ್ನೂ ಓದಿ : ರೇವಪ್ಪಯ್ಯ ಮುತ್ತ್ಯಾನ ಅದ್ದೂರಿ ಜಾತ್ರೆ: ಹೋಳಿಗೆ, ತುಪ್ಪದ ಪ್ರಸಾದ ಸವಿದ ಭಕ್ತವೃಂದ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.