ETV Bharat / state

ತಳವಾರ, ಪರಿವಾರ ಜನಾಂಗಕ್ಕೆ ಎಸ್ಟಿ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

author img

By

Published : Aug 16, 2020, 6:08 PM IST

Updated : Aug 16, 2020, 9:01 PM IST

ಎಸ್ಟಿ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ತಾಲೂಕು ತಳವಾರ ಪರಿವಾರ ಸಮಾಜ ಸೇವಾ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

Protest
Protest

ಮುದ್ದೇಬಿಹಾಳ (ವಿಜಯಪುರ) : ತಳವಾರ ಮತ್ತು ಪರಿವಾರ ಜನಾಂಗಕ್ಕೆ ಎಸ್ಟಿ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ತಾಲೂಕು ತಳವಾರ ಪರಿವಾರ ಸಮಾಜ ಸೇವಾ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ತಾಳಿಕೋಟೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ತಾಲೂಕಾ ಅಧ್ಯಕ್ಷ ಪರಶುರಾಮ ತಂಗಡಗಿ ಮಾತನಾಡಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದಿಸಿ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಷ್ಟ್ರಪತಿಗಳ ರುಜು ಕೂಡಾ ಆಗಿದೆ. ರಾಜ್ಯದಲ್ಲಿ 8 ಲಕ್ಷ ತಳವಾರ ಜನಾಂಗ ಮತ್ತು 2.50 ಲಕ್ಷ ಪರಿವಾರ ಜನಾಂಗವಿದೆ. ಇದನ್ನು ಮನಗಂಡಿರುವ ಸರ್ಕಾರವು ಜಿಲ್ಲಾಧಿಕಾರಿಗಳು, ಸಂಸದರು, ರಾಜ್ಯಸಭಾ ಸದಸ್ಯರು ಅನುಮತಿ ಪಡೆದು ರಾಷ್ಟ್ರಪತಿಗಳ ಅಂಕಿತದೊಂದಿಗೆ ಹೊರಡಿಸಿರುವ ಅಧಿಸೂಚನೆಯನ್ನು ಪರಿಗಣಿಸದೆ ಲೋಕಸಭೆ, ರಾಜ್ಯಸಭೆಯನ್ನು ಅವಮಾನಿಸುವ ಹಕ್ಕುಚುತಿ ಇದಾಗಿದೆ ಎಂದು ಆರೋಪಿಸಿದರು.

ಕೆಲವು ದಿನಗಳ ಹಿಂದೆ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಅಟಲ್‌ ಜೀ ಜನಶ್ರೀ ತಂತ್ರಾಂಶದಲ್ಲಿ ಹಾಕಿ ರಾಜಕೀಯ ಕುತಂತ್ರ ಹೆಣೆದು ಮತ್ತೇ ಪ್ರವರ್ಗ 1ರಲ್ಲಿ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಈ ನಡೆ ತಳವಾರ ಪರಿವಾರದ ಜನರನ್ನು ಕೆರಳಿಸುವಂತೆ ಮಾಡಿದೆ. ಕೂಡಲೇ ತಳವಾರ ಪರಿವಾರ ಜನಾಂಗಕ್ಕೆ ಸರ್ಕಾರದ ಅಧಿಸೂಚನೆಯಂತೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಒದಗಿಸಬೇಕು. ಇಲ್ಲದಿದ್ದರೆ ಇಡೀ ದೇಶಾದ್ಯಂತ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಳಿಕ ತಾಳಿಕೋಟೆ ತಾಲೂಕು ತಹಶೀಲ್ದಾರ್ ಅನೀಲ್ ಕುಮಾರ ಢವಳಗಿ ಅವರಿಗೆ ಮುಖಂಡರು ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು. ನಂತರ ತಳವಾರ ಸಮುದಾಯದ 30 ಜನರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಮಾಡಿದರು. ಈ ಸಮಯದಲ್ಲಿ ತಳವಾರ ಸಮುದಾಯದ ಮುಖಂಡರು ಇದ್ದರು.

Last Updated : Aug 16, 2020, 9:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.