ETV Bharat / state

ಅಸ್ಸೋಂನ ಗುವಾಹಟಿಯಲ್ಲಿ ವಿಜಯಪುರದ ಯೋಧ ಸಾವು - Warrior death by heart attack

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ ಯೋಧ ಹಣಮಂತ ಮಲ್ಲಪ್ಪ ಮುಂಜೆ ಅಸ್ಸೋಂನ ಗುವಾಹಟಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

Vijayapura
ಸಾವನ್ನಪ್ಪಿದ ಯೋಧ
author img

By

Published : Oct 18, 2020, 10:27 PM IST

ವಿಜಯಪುರ: ಗಡಿ ಭದ್ರತಾ ಪಡೆ(ಬಿಎಸ್‌ಎಫ್‌)ಯಲ್ಲಿ ಕರ್ತವ್ಯನಿರತರಾಗಿದ್ದ ಜಿಲ್ಲೆಯ ಯೋಧ ಹಣಮಂತ ಮಲ್ಲಪ್ಪ ಮುಂಜೆ (40) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಇವರು ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ ನಿವಾಸಿಯಾಗಿದ್ದಾರೆ. ಇಂದು ಮುಂಜಾನೆ ಕರ್ತವ್ಯ ಮುಗಿಸಿಕೊಂಡು ಮನೆಗೆ ಬಂದು ಚಹ ಕುಡಿಯುವ ವೇಳೆ ಘಟನೆ ಸಂಭವಿಸಿದೆ.

Vijayapura
ಹೃದಯಾಘಾತದಿಂದ ಸಾವನ್ನಪ್ಪಿದ ಯೋಧ ಹಣಮಂತ ಮಲ್ಲಪ್ಪ ಮುಂಜೆ

ಪತ್ನಿ, ಮಗಳ ಜೊತೆ ಹಣಮಂತ ಗುವಾಹಟಿಯಲ್ಲಿ ವಾಸವಿದ್ದರು. ಮೃತರು ತಂದೆ, ತಾಯಿ, ಇಬ್ಬರು ಸಹೋದರರು, ಒಬ್ಬಳು ಸಹೋದರಿಯನ್ನು ಅಗಲಿದ್ದಾರೆ. ಯೋಧನ ಸಾವಿನ ಸುದ್ದಿ ತಿಳಿದು ಹುಟ್ಟೂರಲ್ಲಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಸೋಮವಾರ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದ್ದು ಅದೇ ದಿನ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.